Select Your Language

Notifications

webdunia
webdunia
webdunia
Saturday, 12 April 2025
webdunia

ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡೋದು ಅನುಮಾನ

ಹಾರ್ದಿಕ್ ಪಾಂಡ್ಯ
ದುಬೈ , ಮಂಗಳವಾರ, 26 ಅಕ್ಟೋಬರ್ 2021 (11:54 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಭುಜಕ್ಕೆ ಪೆಟ್ಟು ಮಾಡಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ತಕ್ಷಣವೇ ಪಾಂಡ್ಯರನ್ನು ಸ್ಕ್ಯಾನಿಂಗ್ ಗೊಳಪಡಿಸಲಾಗಿದೆ. ಅವರ ಗಾಯ ಗಂಭೀರವಲ್ಲದೇ ಹೋದರೂ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವೆನ್ನಲಾಗಿದೆ.

ಭಾರತಕ್ಕೆ ಮುಂದಿನ ಪಂದ್ಯ ಒಂದು ವಾರದ ಬಳಿಕ ನ್ಯೂಜಿಲೆಂಡ್ ವಿರುದ್ಧ. ಈ ಪಂದ್ಯದ ವೇಳೆಗೆ ಪಾಂಡ್ಯ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವಿದೆ. ಹಾಗಿದ್ದರೂ ಗಾಯದ ಸಮಸ್ಯೆಯಿಂದಾಗಿ ಬೌಲಿಂಗ್ ಮಾಡಲಾಗದೇ ಕೇವಲ ಬ್ಯಾಟ್ಸ್ ಮನ್ ಆಗಿ ಬಳಕೆಯಾಗುವ ಹಾರ್ದಿಕ್ ಬದಲು ಇಶಾನ್ ಗೆ ಸ್ಥಾನ ಸಿಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಸೋತ ಬಳಿಕ ವಿರಾಟ್ ಕೊಹ್ಲಿ ನಡೆ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದು ಹೀಗೆ!