Publish Date: Fri, 29 Oct 2021 (14:54 IST)
Updated Date: Fri, 29 Oct 2021 (14:56 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್-ರಮ್ಯಾ ಕಾಂಬಿನೇಷನ್ ಸ್ಯಾಂಡಲ್ ವುಡ್ ನ ಹಿಟ್ ಕಾಂಬಿನೇಷನ್. ಇದೀಗ ಪುನೀತ್ ಹಠಾತ್ ನಿಧನ ನಟಿ ರಮ್ಯಾಗೆ ತೀವ್ರ ಆಘಾತ ತಂದಿದೆ.
ಪುನೀತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಮ್ಯಾ ಪುನೀತ್ ಬಗ್ಗೆ ಕೇವಲ ಒಂದು ಫೋಟೋ ಹಾಕಿ ಆರ್ ಐಪಿ ಎಂದು ಬರೆದರೆ ಸಾಲದು. ನನ್ನ ಭಾವನೆ ಏನೆಂದು ಹೇಳಲೂ ಸಾಧ್ಯವಿಲ್ಲ. ದಯವಿಟ್ಟು ಯಾರೂ ನನಗೆ ಅವರ ಬಗ್ಗೆ ಈಗ ಏನೂ ಕೇಳಬೇಡಿ. ಅವರು ನನಗೆ ಅತ್ಯಂತ ಆತ್ಮೀಯರು, ಅವರ ಬಗ್ಗೆ ಕೇವಲ ಒಂದು ಪೋಸ್ಟ್ ಹಾಕಿದರೆ ಸಾಕಾಗಲ್ಲ. ಈಗ ನನಗೆ ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ರಮ್ಯಾ ಕಣ್ಣೀರು ಮುಡಿದಿದ್ದಾರೆ.