Publish Date: Tue, 02 Nov 2021 (09:15 IST)
Updated Date: Tue, 02 Nov 2021 (09:33 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಐಪಿಎಲ್ ಗೇ ಲಾಯಕ್ಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಐಪಿಎಲ್ ನಲ್ಲಿ ಗರಿಷ್ಠ ರನ್ ಸ್ಕೋರಿಂಗ್ ಮಾಡಿದ್ದ ರಾಹುಲ್ ವಿಶ್ವಕಪ್ ನಲ್ಲಿ ಸಂಪೂರ್ಣ ಎಡವಿದ್ದಾರೆ. ಹೀಗಾಗಿ ರಾಹುಲ್ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯಾಸ ಪಂದ್ಯದಲ್ಲೂ ರಾಹುಲ್ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಇನ್ನು ಕೆಲವರು ಅಭ್ಯಾಸ ಪಂದ್ಯ ಆಡಿ ಎಂದು ಸಲಹೆ ನೀಡಿದ್ದಾರೆ.