Publish Date: Tue, 02 Nov 2021 (08:47 IST)
Updated Date: Tue, 02 Nov 2021 (09:15 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತ ಟೀಂ ಇಂಡಿಯಾ ಮೇಲೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.
ಎರಡೂ ಪಂದ್ಯ ಸೋತ ಕಾರಣಕ್ಕೆ ಟೀಂ ಇಂಡಿಯಾ ಮುಂದಿನ ಹಾದಿ ಕಠಿಣವಾಗಿದೆ. ಅತ್ತ ಗುಂಪು 2 ರಲ್ಲಿ ಪಾಕಿಸ್ತಾನ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನಿಯಾಗಿದೆ.
ಭಾರತ ಮಾತ್ರ ಇನ್ನೂ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಭಾರತೀಯರ ಪ್ರದರ್ಶನ ನೋಡಿದರೆ ಚಾಂಪಿಯನ್ ಆಗುವ ಯಾವ ಲಕ್ಷಣವೂ ಇಲ್ಲ. ಇನ್ನೂ ಐಪಿಎಲ್ ಗುಂಗಿನಲ್ಲೇ ಇರುವಂತಿದೆ ಎಂದು ನೆಟ್ಟಿಗರು ಗರಂ ಆಗಿ ಕಿಡಿ ಕಾರುತ್ತಿದ್ದಾರೆ. ನಾಳೆ ಆಫ‍್ಘಾನಿಸ್ತಾನದ ವಿರುದ್ಧ ಪಂದ್ಯ ನಡೆಯಲಿದೆ.