Publish Date: Fri, 29 Oct 2021 (11:31 IST)
Updated Date: Fri, 29 Oct 2021 (09:33 IST)
ದುಬೈ: ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಜೊತೆಗಿನ ಇತ್ತೀಚೆಗಿನ ಮಾತುಕತೆಯ ಬಗ್ಗೆ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಮಾರ್ಕ್ ಸ್ಟಾಯ್ನಿಸ್ ಕುತೂಲಹಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಐಪಿಎಲ್ ವೇಳೆ ಸ್ಟಾಯ್ನಿಸ್ ಧೋನಿ ಜೊತೆಗೆ ಮಾತನಾಡಿದ್ದರಂತೆ. ಈ ವೇಳೆ ಧೋನಿ ತಮ್ಮ ಬಗ್ಗೆ ಆಡಿದ ಮಾತಿನಿಂದ ನನಗೆ ಕೊಂಚ ಅವಮಾನವಾದಂತಾಯಿತು ಎಂದು ಸ್ಟಾಯ್ನಿಸ್ ಹೇಳಿದ್ದಾರೆ.
ಧೋನಿ ಪಂದ್ಯದ ನಂತರ ನನಗೆ ಯಾವ ರೀತಿ ಫೀಲ್ಡ್ ಸೆಟ್ ಮಾಡಿದ್ದರು, ಯಾವ ರೀತಿ ಬೌಲರ್ ಗಳಿಗೆ ಬಾಲ್ ಮಾಡಲು ಹೇಳಿದ್ದರು ಎಂದು ವಿವರಿಸಿದ್ದರು. ಅವರ ಆ ಮಾತುಗಳು ನನ್ನಲ್ಲಿದ್ದ ಹುಳುಕುಗಳನ್ನು ಎತ್ತಿ ತೋರಿಸುತ್ತಿತ್ತು. ಹೀಗಾಗಿ ಕಿವಿ ಮಾತಿನ ಜೊತೆಗೆ ಕೊಂಚ ಅವಮಾನವೆನಿಸಿತು ಎಂದು ಸ್ಟಾಯ್ನಿಸ್ ಹೇಳಿದ್ದಾರೆ.