Select Your Language

Notifications

webdunia
webdunia
webdunia
webdunia

ಐಪಿಎಲ್ ಗೆ ಸೇರ್ಪಡೆಯಾದ ಹೊಸ ತಂಡಗಳ ವಿವರ ಇಲ್ಲಿದೆ

ಐಪಿಎಲ್ ಗೆ ಸೇರ್ಪಡೆಯಾದ ಹೊಸ ತಂಡಗಳ ವಿವರ ಇಲ್ಲಿದೆ
ಮುಂಬೈ , ಮಂಗಳವಾರ, 26 ಅಕ್ಟೋಬರ್ 2021 (08:50 IST)
ಮುಂಬೈ: ಐಪಿಎಲ್ ನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸಲು ಬಿಸಿಸಿಐ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸಿದ್ದು, ಅದರ ಬಗ್ಗೆ ನಿನ್ನೆ ಸಂಜೆ ಅಧಿಕೃತ ಘೋಷಣೆ ಹೊರಡಿಸಿದೆ.

ಲಕ್ನೋ ಮತ್ತು ಅಹಮ್ಮದಾಬಾದ್ ಹೊಸದಾಗಿ ಸೇರ್ಪಡೆಯಾಗಿರುವ ತಂಡಗಳು. ವಿಶೇಷವೆಂದರೆ ಈ ಎರಡೂ ತಂಡಗಳನ್ನು ಖರೀದಿಸಿರುವುದು ಸಂಜೀವ್ ಗೊಯೆಂಕಾ ಅವರ ಆರ್ ಪಿಜಿಎಸ್ ಸಂಸ್ಥೆ ಮತ್ತು ಸಿವಿಸಿ ಸಂಸ್ಥೆ. ಈ ಮೂಲಕ ಐಪಿಎಲ್ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಮತ್ತು ಭಾರತದ ಮತ್ತಷ್ಟು ದೇಶೀಯ ಕ್ರಿಕೆಟಿಗರನ್ನು ಅಂತಾರಾಷ್ಟ್ರೀಯ ದರ್ಜೆಗೆ ಸಿದ್ಧಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಲಕ್ನೋ ತಂಡವನ್ನು ಆರ್ ಪಿಎಸ್ ಜಿ 7 ಸಾವಿರ ಕೋಟಿ ರೂ. ಗೆ ಮತ್ತು ಅಹಮ್ಮದಾಬಾದ್ ತಂಡವನ್ನು ಸಿವಿಸಿ ಸಂಸ್ಥೆ 5.6 ಸಾವಿರ ಕೋಟಿ ರೂ.ಗೆ ಖರೀದಿ ಮಾಡಿದೆ. ಸಂಜೀವ್ ಗೊಯೆಂಕಾ ಪುಣೆ ಈ ಹಿಂದೆ ಪುಣೆ ವಾರಿಯರ್ಸ್ ತಂಡದ ಮಾಲಿಕರಾಗಿದ್ದರು.  

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ನಲ್ಲಿ ನಿಂದನೆ:ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗರು