Publish Date: Fri, 29 Oct 2021 (09:38 IST)
Updated Date: Fri, 29 Oct 2021 (09:39 IST)
ಮುಂಬೈ: ಕಿಂಗ್ಸ್ ಪಂಜಾಬ್ ನಾಯಕರಾಗಿ ಕೆಎಲ್ ರಾಹುಲ್ ಮುಂದಿನ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.
ಐಪಿಎಲ್ 14 ಮುಗಿದ ಬಳಿಕ ರಾಹುಲ್ ಮಾಡಿದ್ದ ಟ್ವೀಟ್ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಕಿಂಗ್ಸ್ ಪಂಜಾಬ್ ತನ್ನ ನಾಯಕನ ಬಗ್ಗೆ ನೀಡಿರುವ ಪರೋಕ್ಷ ಟಾಂಗ್ ಆ ಸುದ್ದಿಗೆ ಮತ್ತಷ್ಟು ಬಲ ನೀಡಿದೆ.
ರಾಹುಲ್ ತಂಡ ಬಿಡುವ ಬಗ್ಗೆ ಟಾಂಗ್ ಕೊಟ್ಟಿರುವ ಪಂಜಾಬ್ ಮಾಲಿಕ ನೆಸ್ ವಾಡಿಯಾ ರಾಹುಲ್ ಹೊರತಾಗಿಯೂ ತಂಡದಲ್ಲಿ ಬೇರೆ ಆಟಗಾರರಿದ್ದಾರೆ. ಒಬ್ಬರಿಂದ ತಂಡವಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅವರು ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಅವರೊಬ್ಬ ಅತ್ಯುತ್ತಮ ಪ್ರತಿಭೆ. ಆದರೆ ಯಾವ ಆಟಗಾರನ ಮೇಲೂ ಅವಲಂಬಿತವಾಗಿರಬಾರದು ಎಂದು ವಾಡಿಯಾ ಹೇಳಿದ್ದಾರೆ.