ಮುಂಬೈ: ಇತ್ತೀಚೆಗೆ ಕ್ರಿಕೆಟಿಗ ಯಜುವೇಂದ್ರ ಚಾಹಲ್-ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇಬ್ಬರೂ ಇದೆಲ್ಲಾ ಸುಳ್ಳು ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ಇದೀಗ ಧನಶ್ರೀ ವರ್ಮ ತಮ್ಮ ಇನ್ ಸ್ಟಾ ಪುಟದಲ್ಲಿ ಪತಿ ಚಾಹಲ್ ಜೊತೆಗೆ ರೀಲ್ಸ್ ಒಂದನ್ನು ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಧನಶ್ರೀ ನಾನು ಒಂದು ತಿಂಗಳು ತವರಿಗೆ ಹೋಗುತ್ತೇನೆ ಎಂದಾಗ ಚಾಹಲ್ ಖುಷಿಯಿಂದ ಕುಣಿದಾಡುತ್ತಾರೆ.
ಈ ಫನ್ನಿ ವಿಡಿಯೋ ಮೂಲಕ ತಾವಿಬ್ಬರೂ ಒಂದಾಗಿಯೇ ಇರುವುದಾಗಿ ಧನಶ್ರೀ ಮತ್ತೆ ಸ್ಪಷ್ಟನೆ ನೀಡಿದ್ದಾರೆ.