Publish Date: Wed, 24 Aug 2022 (10:40 IST)
Updated Date: Wed, 24 Aug 2022 (10:43 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಪುತ್ರಿ ಅಥಿಯಾ ಶೆಟ್ಟಿ ಮದುವೆಯಾಗುವ ವಿಚಾರವನ್ನು ಖುದ್ದು ಸುನಿಲ್ ಶೆಟ್ಟಿ ಖಚಿತಪಡಿಸಿದ್ದಾರೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಕೆಎಲ್ ರಾಹುಲ್ ಮತ್ತು ಅಥಿಯಾ ಈ ವರ್ಷದಂತ್ಯಕ್ಕೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಶೆಟ್ಟಿ ಇಬ್ಬರೂ ಮದುವೆಯಾಗುವುದು ನಿಜ. ಆದರೆ ಸದ್ಯಕ್ಕೆ ಇಬ್ಬರಿಗೂ ಮದುವೆಗೆ ಪುರುಸೊತ್ತಿಲ್ಲ ಎಂದಿದ್ದಾರೆ.
ಕೆಎಲ್ ರಾಹುಲ್ ಈಗ ಏಷ್ಯಾ ಕಪ್, ವಿಶ್ವಕಪ್, ದ.ಆಫ್ರಿಕಾ ಟೂರ್, ಅದಾದ ಬಳಿಕ ಆಸ್ಟ್ರೇಲಿಯಾ ಟೂರ್ ಎಂದು ಬ್ಯುಸಿ. ಮದುವೆ ಒಂದೇ ದಿನದಲ್ಲಿ ಮುಗಿಯಲ್ಲ ಅಲ್ವಾ? ಸದ್ಯಕ್ಕೆ ರಾಹುಲ್ ಗೆ ಸಮಯವೇ ಇಲ್ಲ. ಮಕ್ಕಳಿಗೆ ಪುರುಸೊತ್ತು ಸಿಕ್ಕಾಗ ಮದುವೆಯಾಗ್ತಾರೆ ಎಂದಿದ್ದಾರೆ ಸುನಿಲ್ ಶೆಟ್ಟಿ.