ವಿಶಾಖಪಟ್ಟಣ: ಮಿಚೆಲ್ ಸ್ಟಾರ್ಕ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ತತ್ತರಿಸಿತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್‌ನ ಇಂದಿನ ಪಂದ್ಯಾಟದಲ್ಲಿ ಎರಡನೇ ಗೆಲುವು ಸಾಧಿಸಿತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಅಕ್ಷರ್ ಪಟೇಲ್ ಪಡೆಗೆ ಇದು ಎರಡನೇ ಗೆಲುವು. ಸನ್‌ರೈಸರ್ಸ್ ತಂಡಕ್ಕೆ ಇದು ಸತತ ಎರಡನೇ ಸೋಲು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಶುಭಾರಂಭ ಮಾಡಿದ್ದ ಸನ್‌ರೈಸರ್ಸ್ ನಂತರ ಲಕ್ನೋ ವಿರುದ್ಧ ಮುಗ್ಗರಿಸಿತು.
ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಪ್ಯಾಟ್‌ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅನಿಕೇತ್ ವರ್ಮಾ(74) ಮತ್ತು ಹೆನ್ರಿಡ್ಜ್ ಕ್ಲಾಸೆನ್(32) ಹೊರತು ಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು.
ಮಿಚೆಲ್ ಸ್ಟಾರ್ಕ್ ದಾಳಿಗೆ ಹೈದರಾಬಾದ್ ಬ್ಯಾಟರ್‌ಗಳು 18.4ಓವರ್‌ಗಳಲ್ಲಿ 163ಗಳಿಸಿ ಆಲ್ ಔಟ್ ಆಯಿತು. ಮಿಚೆಲ್ ಸ್ಟಾರ್ಕ್ ಅವರು 5 ವಿಕೆಟ್ ಪಡೆದು ಸಂಭ್ರಮಿಸಿದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ 24 ಎಸೆತ ಬಾಕಿ ಇರುವಂತೆ ಮೂರು ವಿಕೆಟ್ ಕಳೆದುಕೊಂಡು 166ರನ್ ಗಳಿಸಿ ಅಮೋಘ ಜಯ ಗಳಿಸಿತು.