ನವದೆಹಲಿ: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿರುವ ಕೆಎಲ್ ರಾಹುಲ್ ಐಪಿಎಲ್ ನ ಮೊದಲ ಪಂದ್ಯವನ್ನೇ ಮಿಸ್ ಮಾಡಿಕೊಂಡಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಮರಳುವ ದಿನ ಫಿಕ್ಸ್ ಆಗಿದೆ.
ತಂದೆಯಾದ ಖುಷಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯವನ್ನು ಅರ್ಧಕ್ಕೇ ಕೈ ಬಿಟ್ಟು ಪತ್ನಿ ಜೊತೆಗಿರಲು ಮನೆಗೆ ತೆರಳಿದ್ದರು. ಹೆಣ್ಣು ಮಗುವಿಗೆ ತಂದೆಯಾದ ರಾಹುಲ್ ಗೆ ಡೆಲ್ಲಿ ತಂಡವೂ ವಿಶಿಷ್ಟ ವಿಡಿಯೋ ಮೂಲಕ ವಿಶ್ ಮಾಡಿತ್ತು.
ಇದೀಗ ಕೆಎಲ್ ರಾಹುಲ್ ನಾಲ್ಕೈದು ದಿನಗಳನ್ನು ತಮ್ಮ ಪತ್ನಿ, ಮಗಳ ಜೊತೆ ಕಳೆದಿದ್ದು ಡ್ಯಾಡೀ ಡ್ಯೂಟಿ ಮುಗಿಸಿ ಮತ್ತೆ ಐಪಿಎಲ್ ಡ್ಯೂಟಿಗೆ ಹಾಜರಾಗಲು ಹೊರಟಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯಕ್ಕೆ ರಾಹುಲ್ ಹಾಜರಾಗಲಿದ್ದಾರೆ.
ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ರಾಹುಲ್ ಲಭ್ಯರಿರಲಿದ್ದಾರೆ.ಮೊದಲ ಪಂದ್ಯವನ್ನು ಡೆಲ್ಲಿ ತಂಡ ಲಕ್ನೋ ವಿರುದ್ಧ ರೋಚಕ 1 ವಿಕೆಟ್ ನಿಂದ ಗೆದ್ದುಕೊಂಡಿತ್ತು.