Select Your Language

Notifications

webdunia
webdunia
webdunia
webdunia

ಸೂರ್ಯಕುಮಾರ್ ಗಿಂತ ಶ್ರೇಯಸ್ ಅಯ್ಯರ್ ಬೆಸ್ಟ್ ಟಿ20 ಪ್ಲೇಯರ್, ಕ್ಯಾಪ್ಟನ್: ನೀವೇನಂತೀರಾ

Shreyas Iyer

Krishnaveni K

ಮುಂಬೈ , ಬುಧವಾರ, 26 ಮಾರ್ಚ್ 2025 (10:03 IST)
Photo Credit: X
ಮುಂಬೈ: ಟಿ20 ಕ್ರಿಕೆಟ್ ನಲ್ಲಿ ಸೂರ್ಯಕುಮಾರ್ ಯಾದವ್ ಗಿಂತಲೂ ಶ್ರೇಯಸ್ ಅಯ್ಯರ್ ಬೆಸ್ಟ್ ಪ್ಲೇಯರ್, ಕ್ಯಾಪ್ಟನ್. ಹೀಗಂತ ನಿನ್ನೆಯ ಶ್ರೇಯಸ್ ಅಯ್ಯರ್ ಆಟ ನೋಡಿದ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ನೀವೇನಂತೀರಾ?

ಟೀಂ ಇಂಡಿಯಾದ ಟಿ20 ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅವರ ನಾಯಕತ್ವದಲ್ಲಿ ತಂಡ ಸತತವಾಗಿ ಟಿ20 ಸರಣಿ ಗೆದ್ದುಕೊಂಡಿದೆ. ಆದರೆ ಶ್ರೇಯಸ್ ನಂತೆ ನಿಯಮಿತವಾಗಿ ಪ್ರದರ್ಶನ ನೀಡಿಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಅಜೇಯ 97 ರನ್ ಗಳ ಇನಿಂಗ್ಸ್ ಅಭಿಮಾನಿಗಳ ಮನೆ ಸೆಳೆದಿದೆ. ಕೇವಲ 42 ಎಸೆತಗಳಲ್ಲಿ ಅವರು ಈ ರನ್ ಗಳಿಸಿದ್ದರು. ಶತಕದ ಅವಕಾಶವನ್ನೂ ತಂಡಕ್ಕಾಗಿ ತ್ಯಾಗ ಮಾಡಿದರು. ಅವರ ಈ ಸ್ವಾರ್ಥರಹಿತ ಇನಿಂಗ್ಸ್ ಅಭಿಮಾನಿಗಳ ಮನ ಸೆಳೆದಿದೆ.

ಈ ಕಾರಣಕ್ಕೆ ಟಿ20 ಕ್ರಿಕೆಟ್ ನಲ್ಲಿ ಸೂರ್ಯಗಿಂತಲೂ ಶ್ರೇಯಸ್ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ. ಶ್ರೇಯಸ್ ಅಯ್ಯರ್ ಗೆ ಟೀಂ ಇಂಡಿಯಾ ಟಿ20 ತಂಡದಲ್ಲಿ ಅವಕಾಶ ಸಿಗಲ್ಲ. ಆದರೆ ಐಪಿಎಲ್ ನಲ್ಲಿ ಅವರು ಈಗಾಗಲೇ ಕೆಕೆಆರ್ ತಂಡದ ನಾಯಕರಾಗಿ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಪಂಜಾಬ್ ತಂಡದ ನಾಯಕರಾಗಿಯೂ ಮಿಂಚುತ್ತಿದ್ದಾರೆ. ಈ ಕಾರಣಕ್ಕೆ ಅಭಿಮಾನಿಗಳು ಈ ರೀತಿ ಅಭಿಪ್ರಾಯಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಕನ್ನಡಿಗ ಆಟಗಾರನ ನೆರವಿನಿಂದ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಗೆಲುವು ಕಂಡ ಪಂಜಾಬ್ ಕಿಂಗ್ಸ್