Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಮಗುವಾದ ಖುಷಿಯನ್ನು ಡೆಲ್ಲಿ ತಂಡ ಸಂಭ್ರಮಿಸಿದ್ದು ಹೀಗೆ: ಕ್ಯೂಟ್ ವಿಡಿಯೋ

Delhi Capitals

Krishnaveni K

ನವದೆಹಲಿ , ಮಂಗಳವಾರ, 25 ಮಾರ್ಚ್ 2025 (16:14 IST)
Photo Credit: X
ನವದೆಹಲಿ: ಐಪಿಎಲ್ 2025 ರಲ್ಲಿ ಮೊದಲ ಪಂದ್ಯ ಗೆದ್ದ ಖುಷಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇದರ ಜೊತೆಗೆ ತಂಡದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಗೆ ಮಗುವಾದ ಖುಷಿಯನ್ನು ಆಟಗಾರರು ಕ್ಯೂಟ್ ಆಗಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

ಕೆಎಲ್ ರಾಹುಲ್ ಎಲ್ಲಾ ಸರಿ ಹೋಗಿದ್ದರೆ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವಾಡಬೇಕಿತ್ತು. ಆದರೆ ಪತ್ನಿ ಹೆರಿಗೆ ಹಿನ್ನಲೆಯಲ್ಲಿ ದಿಡೀರ್ ಆಗಿ ತಂಡ ತೊರೆದು ಮನೆಗೆ ತೆರಳಿದ್ದರು. ನಿನ್ನೆಯ ಪಂದ್ಯ ಗೆದ್ದ ಸಂಭ್ರಮ ಒಂದೆಡೆಯಾದರೆ ಡೆಲ್ಲಿ ಅಭಿಮಾನಿಗಳಿಗೆ ಕೆಎಲ್ ರಾಹುಲ್ ಗೆ ಹೆಣ್ಣು ಮಗುವಾಗಿರುವ ಖುಷಿ ಸುದ್ದಿ ಸಿಕ್ಕಿತ್ತು.

ಹೀಗಾಗಿ ನಿನ್ನೆಯ ಪಂದ್ಯದ ಗೆಲುವಿನ ನಂತರ ಡೆಲ್ಲಿ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ಮಗುವನ್ನು ಎತ್ತಿ ಆಡಿಸುವಂತೆ ಸಂಜ್ಞೆ ಮಾಡಿ ರಾಹುಲ್ ಗೆ ವಿಶ್ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಮತ್ತೊಂದು ಸಂಭ್ರಮ ಎಂದು ಡೆಲ್ಲಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದೆ.

ಇನ್ನು, ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಕೆಎಲ್ ರಾಹುಲ್ ಕೂಡಾ ವಿಡಿಯೋ ನೋಡಿ ಧನ್ಯವಾದ ಸಲ್ಲಿಸಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

Ashutosh Sharma: ಡೆಲ್ಲಿ ಗೆಲ್ಲಿಸಿದ ಆಶುತೋಷ್ ಶರ್ಮಾ ಆರ್ ಸಿಬಿ ಪಾಲಾಗಬೇಕಿತ್ತು, ಕೊನೆಯ ಕ್ಷಣದಲ್ಲಿ ಕೈ ತಪ್ಪಿದ್ದು ಹೇಗೆ