Select Your Language

Notifications

webdunia
webdunia
webdunia
webdunia

KL Rahul: ಮತ್ತೆ ತ್ಯಾಗರಾಜನಾದ ಕೆಎಲ್ ರಾಹುಲ್, ಡೆಲ್ಲಿ ತಂಡಕ್ಕಾಗಿ ಕೈಗೊಂಡ ದೊಡ್ಡ ನಿರ್ಧಾರವೇನು

KL Rahul

Krishnaveni K

ನವದೆಹಲಿ , ಬುಧವಾರ, 19 ಮಾರ್ಚ್ 2025 (10:01 IST)
ದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿರುವ ಕನ್ನಡಿಗ ಬ್ಯಾಟಿಗ ಕೆಎಲ್ ರಾಹುಲ್ ಮತ್ತೊಮ್ಮೆ ತಂಡಕ್ಕಾಗಿ ದೊಡ್ಡ ತ್ಯಾಗ ಮಾಡಲು ಮುಂದಾಗಿದ್ದಾರೆ.

ಕೆಎಲ್ ರಾಹುಲ್ ಐಪಿಎಲ್ ನಲ್ಲಿ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದರು. ಪಂಜಾಬ್, ಲಕ್ನೋ, ಆರ್ ಸಿಬಿ ಯಾವುದೇ ತಂಡದ ಪರ ಆಡಿದಾಗಲೂ ರಾಹುಲ್ ಬಹುತೇಕ ಓಪನರ್ ಆಗಿದ್ದರು. ಟೀಂ ಇಂಡಿಯಾದಲ್ಲೂ ಅವರು ಹೆಚ್ಚು ಯಶಸ್ಸು ಕಂಡಿದ್ದು ಓಪನರ್ ಆಗಿ.

ಆದರೆ ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಅವರು ಅಕ್ಷರಶಃ ಪ್ರಯೋಗಪಶುವಾಗಿದ್ದಾರೆ. ತಂಡದ ಸಮತೋಲನ ಕಾಯ್ದುಕೊಳ್ಳಲು ನಾಲ್ಕು, ಐದು, ಆರು ಹೀಗೆ ಯಾವ ಕ್ರಮಾಂಕದಲ್ಲಿ ಬೇಕಾದರೂ ಕಣಕ್ಕಿಳಿಯುತ್ತಿದ್ದರು.

ಇದೀಗ ಡೆಲ್ಲಿ ತಂಡದಲ್ಲೂ ಅವರು ತಮ್ಮ ಸ್ಥಾನ ತ್ಯಾಗ ಮಾಡಲಿದ್ದಾರೆ. ತಂಡದ ಬ್ಯಾಟಿಂಗ್ ಸಮತೋಲನದಿಂದಿರಲು ರಾಹುಲ್ ಓಪನರ್ ಸ್ಥಾನ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಲು ನಿರ್ಧರಿಸಿದ್ದಾರೆ. ಡೆಲ್ಲಿ ಪರ ಈ ಬಾರಿ ಹೊಡೆಬಡಿಯ ದಾಂಡಿಗರಾದ ಜೇಕ್ ಫ್ರೇಝರ್ ಮತ್ತು ಮೆಕ್ ಗರ್ಕ್ ಓಪನರ್ ಆಗಿ ಕಣಕ್ಕಿಳಿಯಬಹುದು. ಮಧ್ಯಮ ಕ್ರಮಾಂಕದಲ್ಲಿ ಅನುಭವಿಯೊಬ್ಬರ ಅಗತ್ಯವಿರುವುದರಿಂದ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ನಿರೀಕ್ಷೆಯಿದೆ. ಆ ಮೂಲಕ ಮತ್ತೊಮ್ಮೆ ತಾವು ಟೀಂ ಮ್ಯಾನ್ ಎಂದು ಸಾಬೀತುಪಡಿಸಿದ್ದಾರೆ ರಾಹುಲ್.

Share this Story:

Follow Webdunia kannada

ಮುಂದಿನ ಸುದ್ದಿ

ಕುಗ್ಗಿದಾಗ ಕುಟುಂಬ ಹತ್ತಿರ ಬೇಕು: ವಿರಾಟ್ ಕೊಹ್ಲಿ ಗರಂ ಆದ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ