ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಕೆಲ ತಂಡಗಳಿಗೆ ಸಾರಥಿಗಳ ಆಯ್ಕೆ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿ ಆಲ್‌ರೌಂಡರ್ ಅಕ್ಷರ್ ಪಟೇಲ್ ನೇಮಕಗೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ರೇಸ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಮುಂಚೂಣಿಯಲ್ಲಿದ್ದರು. ಇದೀಗ ಅಕ್ಷರ್ ಪಟೇಲ್‌ಗೆ ಫ್ರ್ಯಾಂಚೈಸಿ ಮಣೆಹಾಕಿದೆ. ಕಳೆದ ಆರು ವರ್ಷಗಳಿಂದ ಅಕ್ಷರ್ ಅವರು ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು.
2024ರ ಮೆಗಾ ಹರಾಜಿಗೆ ಮುನ್ನ ₹ 16.50 ಕೋಟಿಗೆ ಕ್ಯಾಪಿಟಲ್ಸ್ ತಂಡದ ಗರಿಷ್ಠ ರಿಟರ್ನ್ ಆಗಿದ್ದರು. ನಾಯಕತ್ವದ ಅನುಭವವಿಲ್ಲದಿದ್ದರೂ 2025ರ ಜನವರಿಯಲ್ಲಿ ಅವರು ಭಾರತದ ಟಿ20 ತಂಡದ ಉಪನಾಯಕರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಗಳು ಸೇರಿದಂತೆ 23 ಪಂದ್ಯಗಳಲ್ಲಿ ಗುಜರಾತ್ ಅನ್ನು ಮುನ್ನಡೆಸಿ ಅನುಭವ ಹೊಂದಿದ್ದಾರೆ.
ಕ್ಯಾಪಿಟಲ್ಸ್ ತಂಡವು ಮಾರ್ಚ್ 24 ರಂದು ವಿಶಾಖಪಟ್ಟಣಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ 14 ಅಂಕಗಳನ್ನು ಗಳಿಸಿತ್ತು.