Select Your Language

Notifications

webdunia
webdunia
webdunia
webdunia

ಹೆನ್ರಿ ಸಿಕ್ಸರ್ ಅಬ್ಬರಕ್ಕೆ ಕ್ಯಾಪಿಟಲ್ಸ್ ತಬ್ಬಿಬ್ಬು: ಚೇಸಿಂಗ್‌ ತಂಡವೇ ಗೆಲ್ಲುವ ಸಂಪ್ರದಾಯ ಮುರಿದ ಯುಪಿ

ಹೆನ್ರಿ ಸಿಕ್ಸರ್ ಅಬ್ಬರಕ್ಕೆ ಕ್ಯಾಪಿಟಲ್ಸ್ ತಬ್ಬಿಬ್ಬು: ಚೇಸಿಂಗ್‌ ತಂಡವೇ ಗೆಲ್ಲುವ ಸಂಪ್ರದಾಯ ಮುರಿದ ಯುಪಿ

Sampriya

ಬೆಂಗಳೂರು , ಭಾನುವಾರ, 23 ಫೆಬ್ರವರಿ 2025 (09:46 IST)
Photo Courtesy X
ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಈ ಆವೃತ್ತಿಯ ಮೊದಲ ಆರು ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಜಯ ಸಾಧಿಸಿವೆ. ಆದರೆ, ಇದೇ ಮೊದಲ ಬಾರಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಜಯ ಸಾಧಿಸಿದೆ.

ಬೆಂಗಳೂರು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು 33 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ, ಚೇಸಿಂಗ್‌ ತಂಡವೇ ಗೆಲುವು ಸಾಧಿಸುವ ಸಂಪ್ರದಾಯವನ್ನು ಮುರಿಯಿತು. ಜೊತೆಗೆ ಹ್ಯಾಟ್ರಿಕ್‌ ಸೋಲನ್ನು ತಪ್ಪಿಸಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡಕ್ಕೆ ಹೆನ್ರಿ ಆಸರೆಯಾದರು. ಅವರು ದಾಖಲೆಯ ಅರ್ಧಶತಕ ಸಿಡಿಸಿದರು. ಅವರಿ 23 ಎಸೆತಗಳಲ್ಲಿ ಎಂಟು ಸಿಕ್ಸ್ ಬಾರಿಸಿ ಒಟ್ಟು 62 ರನ್ ಗಳಿಸಿದರು. ಮೇಕ್ ಗ್ರಾತ್ 23 ಎಸೆತಗಳಲ್ಲಿ 24 ರನ್ ಗಳಿಸಿದ್ದರಿಂದ ವಾರಿಯರ್ಸ್‌ 9 ವಿಕೆಟ್‌ಗೆ 177 ರನ್ ಗಳಿಸಿತ್ತು.

178 ರರ್‌ಗಳ ಗುರಿ ಪಡೆದ ಡೆಲ್ಲಿ ತಂಡ ಆರಂಭದಲ್ಲೇ ಕುಸಿಯಿತು. ನಾಯಕಿ ಮೆಗ್ ಲ್ಯಾನಿಂಗ್ 5 ರನ್ ಗಳಿಸಿ ಔಟಾದರೆ, ಶಫಾಲಿ ವರ್ಮಾ 24 ರನ್ ಗಳಿಸಿ ಪೆವಿಲಿಯನ್‌ ಸೇರಿದರು. ಮರಿಜಾನ್ನೆ ಕಾಪ್ 9 ರನ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ 5 ರನ್ ಗಳಿಸಿ ಔಟಾದರು.

ಬಳಿಕ ಸ್ಪೊಟಕ ಬ್ಯಾಟಿಂಗ್ ಮಾಡಿದ ಜೆಮಿಮಾ ರಾಡ್ರಿಗಸ್ 35 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 56 ರನ್ ಗಳಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ನಂತರ ಬಂದ ಯಾವುದೇ ಬ್ಯಾಟರ್‌ಗಳು ದಡ ಸೇರಿಸುವಲ್ಲಿ ವಿಫಲವಾದರು. ಯುಪಿ ವಾರಿಯರ್ಸ್ ಪರ ಕ್ರಾಂತಿಗೌಡ್, ಗ್ರೇಸ್ ಹ್ಯಾರಿಸ್ ತಲಾ 4 ವಿಕೆಟ್ ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ICC Champions Trophy: ಹಲವು ದಾಖಲೆಯೊಂದಿಗೆ ಆಂಗ್ಲರ ವಿರುದ್ಧ ಸವಾರಿ ಮಾಡಿದ ಕಾಂಗರೂ ಪಡೆ