ಬೆಂಗಳೂರು: ಈಚೆಗೆ ಹೆಣ್ಣು ಮಗುವಿನ ತಂದೆಯಾಗಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಇದೀಗ ಡ್ಯಾಡಿ ಡ್ಯೂಟಿ ಮುಗಿಸಿ ಇಂದಿನ ಐಪಿಎಲ್ ಪಂದ್ಯಾಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಇನ್ನೂ ಪಂದ್ಯಾಟಕ್ಕೂ ಮುನ್ನಾ ಪ್ರಾಕ್ಟೀಸ್ ವೇಳೆ ಸಹ ಆಟಗಾರನೊಬ್ಬ ಕೆಎಲ್ ರಾಹುಲ್ ಬಳಿ ಮಗಳ ಬಗ್ಗೆ ಕೇಳಿದ್ದಾರೆ. ನಿಮ್ಮ ಮಗಳು ಹೇಗಿದ್ದಾಳೆ ಎಂದು ಕೇಳಿದ್ದಾರೆ. ಅದಕ್ಕೆ ನಗುಮುಖದಲ್ಲೇ ಉತ್ತರಿಸಿದ ರಾಹುಲ್, ಮುದ್ದಾಗಿದ್ದಾಳೆ. ನಿಸ್ಸಂಶಯವಾಗಿ ನಾನು ಮುದ್ದಾಗಿದ್ದಾಳೆ ಅಂತಾನೇ ಹೇಳುತ್ತೇನೆ.
ಅದಲ್ಲದೇ ಮಗಳು ಇಷ್ಟೂ ಉದ್ದ ಇದ್ದಾಳೆ ಅಂತಾ ಕೈಯಲ್ಲಿ ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರ್ಚ್ 24ರಂದು ಟೀಂ ಇಂಡಿಯಾ ಕ್ರಿಕೆಟರ್ ಕೆಎಲ್ ರಾಹುಲ್, ಬಾಲಿವುಡ್ ನಟ ಅಥಿಯಾ ಶೆಟ್ಟಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದರು.
ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಈ ಜೋಡಿ ಜನವರಿ 2023ರಲ್ಲಿ ವಿವಾಹವಾದರು. ಅವರು ನವೆಂಬರ್ 2024ರಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದರು. ನಮ್ಮ ಸುಂದರ ಆಶೀರ್ವಾದ ಶೀಘ್ರದಲ್ಲೇ ಬರಲಿದೆ ಎಂದು 2025ರಲ್ಲಿ ಪೋಸ್ಟ್ ಹಾಕಿದ್ದರು.
ಐಪಿಎಲ್ 2025ರ 18ನೇ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯಾಟದ ದಿನವೇ ಕೆಎಲ್ ರಾಹುಲ್ ಅವರಿಗೆ ಹೆಣ್ಣು ಮಗುವನ್ನು ಸ್ವಾಗತಿಸಿದರು.