ಅಹಮಾದಾಬಾದ್: ಐಪಿಎಲ್ 18ನೇ ಆವೃತ್ತಿಯ ಇಂದಿನ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 8ವಿಕೆಟ್ ಕಳೆದುಕೊಂಡು 196 ರನ್ ಗಳಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್‌ಗೆ 197ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.
ಟಾಸ್ ಗೆದ್ದ MI ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಮೊದಲು ಬೌಲಿಂಗ್ ಆಯ್ದುಕೊಂಡು, ಗುಜರಾತ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೈದಾರಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉತ್ತಮ ಆರಂಭ ಮಾಡಿದ ಗುಜರಾತ್ ಟೈಟನ್ಸ್ 8 ವಿಕೆಟ್ ನಷ್ಟಕ್ಕೆ 20ಓವರ್‌ಗಳಲ್ಲಿ 196ರನ್ ಗಳಿಸಿದೆ.
ಎರಡೂ ತಂಡಗಳು ಋತುವಿನ ನಿರಾಶಾದಾಯಕ ಆರಂಭದ ನಂತರ ತಮ್ಮ ಮೊದಲ ಗೆಲುವು ಸಾಧಿಸುವ ಗುರಿಯನ್ನು ಹೊಂದಿವೆ.
ಒಂದು ಪಂದ್ಯದ ನಿಷೇಧದ ನಂತರ ತಂಡಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯಾಟದಲ್ಲಿ ಗುಜರಾತ್ 11ರನ್‌ಗಳಿಂದ ಸೋಲು ಅನುಭವಿಸಿತು. ಇದೀಗ ಇಂದಿನ ಪಂದ್ಯಾಟದಮೂಲಕ ಗೆಲುವಿನ ನಗೆಯನ್ನು ಬೀರುವ ಹುಮ್ಮಸ್ಸಿನಲ್ಲಿ ಗುಜರಾತ್ ಟೈಟನ್ಸ್ ಇದೆ.