Select Your Language

Notifications

webdunia
webdunia
webdunia
webdunia

MI vs GT: ನಾಯಕ ಹಾರ್ದಿಕ್ ಪಾಂಡ್ಯ ವಾಪಾಸ್ಸಾದರೂ ಮುಂಬೈಗೆ ಒಲಿಯದ ಜಯ

MI vs GT

Sampriya

ಅಹಮದಾಬಾದ್‌ , ಶನಿವಾರ, 29 ಮಾರ್ಚ್ 2025 (23:47 IST)
Photo Courtesy X
ಅಹಮಾದಾಬಾದ್‌: ಐಪಿಎಲ್‌ 18ನೇ ಆವೃತ್ತಿಯ ಇಂದು ನಡೆದ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಅಮೋಘ ಜಯ ಸಾಧಿಸಿದೆ. ಟಾಸ್‌ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ದುಕೊಂಡು ಫೀಲ್ಡಿಂಗ್‌ಗೆ ಇಳಿಯಿತು. ಆದರೆ ಗುಜರಾತ್ ಟೈನ್ಸ್‌ ಉತ್ತಮ ಆರಂಭದೊಂದಿಗೆ ಮುಂಬೈ ಇಂಡಿಯನ್ಸ್‌ಗೆ 197ರನ್‌ಗಳ ಗೆಲುವಿನ ಟಾರ್ಗೇಟ್ ನೀಡಿತ್ತು.

ಆದರೆ ಹಾರ್ದಿಕ್ ಪಾಂಡ್ಯ ಪಡೆ ಗುಜರಾತ್ ಟೈಟನ್ಸ್‌ ಬೌಲಿಂಗ್‌ಗೆ 20 ಓವರ್‌ಗಳಲ್ಲಿ 7ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಗುಜರಾತ್ ಟೈಟನ್ಸ್ 36ರನ್‌ಗಳಿಂದ ಜಯ ಸಾಧಿಸಿತು.  ಪಂಜಾಬ್ ವಿರುದ್ಧ ನಿರಾಶಾದಾಯಕ ಆರಂಭದ ನಂತರ  ಇದೀಗ ಗುಜರಾತ್ ತವರಿನಲ್ಲಿ ಗೆಲುವಿನ ನಗೆ ಬೀರಿದೆ.

ಇಂದಿನ ಎರಡೂ ತಂಡಗಳು ಋತುವಿನ ನಿರಾಶಾದಾಯಕ ಆರಂಭದ ನಂತರ ತಮ್ಮ ಮೊದಲ ಗೆಲುವು ಸಾಧಿಸುವ ಗುರಿಯನ್ನು ಹೊಂದಿತು. ಒಂದು ಪಂದ್ಯದ ನಿಷೇಧದ ನಂತರ ತಂಡಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂದು ಗೆಲುವಿನ ನಿರೀಕ್ಷೆಯಲ್ಲಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳುವ ಗುರಿಯಲ್ಲಿದ್ದ ಮುಂಬೈಗೆ ಮತ್ತೇ ಸೋಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

MI vs GT: ಹಾರ್ದಿಕ್ ಪಾಂಡ್ಯ ಪಡೆಗೆ 197ರನ್‌ಗಳ ಗೆಲುವಿನ ಗುರಿ ನೀಡಿದ ಗುಜರಾತ್‌