Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ತಮ್ಮ ಪತ್ನಿಗೆ ಕೊಡುವ ಚುಂಬನಕ್ಕೂ ಕಾಪಿ ರೈಟ್ ಮಾಡಿಸಿಕೊಳ್ಳೋ ಸ್ಥಿತಿ!

ವಿರಾಟ್ ಕೊಹ್ಲಿ ತಮ್ಮ ಪತ್ನಿಗೆ ಕೊಡುವ ಚುಂಬನಕ್ಕೂ ಕಾಪಿ ರೈಟ್ ಮಾಡಿಸಿಕೊಳ್ಳೋ ಸ್ಥಿತಿ!
ಮುಂಬೈ , ಶುಕ್ರವಾರ, 16 ಮಾರ್ಚ್ 2018 (09:20 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅದೆಷ್ಟೋ ಯುವ ಪ್ರೇಮಿಗಳಿಗೆ, ದಂಪತಿಗೆ ಆದರ್ಶ. ಆದರೆ ಇದು ಎಷ್ಟರ ಮಟ್ಟಿಗೆ ಎಂದರೆ ಅವರು ಕಿಸ್ ಮಾಡುವ ರೀತಿಯನ್ನೂ ಇನ್ನೊಬ್ಬರು ಕಾಪೊ ಮಾಡುತ್ತಿದ್ದಾರೆ!
 

ಇತ್ತೀಚೆಗಷ್ಟೇ ವಿರಾಟ್ ಗೆ ಬಗ್ಗಿ ಅನುಷ್ಕಾ ಮುದ್ದಿಸುವ ಫೋಟೋವನ್ನು ಸ್ವತಃ ವಿರಾಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಈ ಫೋಟೋ ನೋಡಿ ಅದೆಷ್ಟೋ ಅಭಿಮಾನಿಗಳು ಖುಷಿಪಟ್ಟಿದ್ದರು.

ಆದರೆ ಇದೇ ಫೋಟೋವನ್ನು ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳಾಗಿದ್ದ, ಸದ್ಯ ಪರಸ್ಪರ ಪ್ರೇಮಿಗಳಾಗಿರುವ ಬಾಂದ್ಗಿ ಕಾರ್ಲಾ ಮತ್ತು ಪುನೀಶ್ ಕಾಪಿ ಮಾಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಕಿಸ್ ಕಾಪಿ ಮಾಡುತ್ತಿದ್ದೇವೆ ತಮಾಷೆಯಾಗಿ ಅಡಿಬರಹವನ್ನೂ ಬರೆದಿದ್ದಾರೆ.

webdunia
ಆದರೆ ಅವರ ತಮಾಷೆ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಈ ಕಿಸ್ ನಿಮಗಲ್ಲ. ಅವರಿಗೇ ಹೆಚ್ಚು ಸೂಟ್ ಆಗುತ್ತದೆ ಎಂದು ಅಭಿಮಾನಿಗಳು ಲೇವಡಿ ಮಾಡಿದ್ದಾರೆ.








ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

40 ನೇ ವಯಸ್ಸಿನಲ್ಲೂ ದ್ವಿಶತಕ ಬಾರಿಸಿದ ವಾಸಿಂ ಜಾಫರ್ ದಾಖಲೆ