Publish Date: Fri, 16 Mar 2018 (09:12 IST)
Updated Date: Fri, 16 Mar 2018 (13:48 IST)
ನಾಗ್ಪುರ: ಇಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯಾವಳಿಯಲ್ಲಿ ವಿದರ್ಭ ತಂಡದ ಪರ ಆಡಿದ 40 ವರ್ಷದ ಹಿರಿಯ ಕ್ರಿಕೆಟಿಗ ವಾಸಿಂ ಜಾಫರ್ ದ್ವಿಶತಕ ಸಿಡಿಸಿ ದಾಖಲೆ ಮಾಡಿದ್ದಾರೆ.
ಇತರ ಭಾರತ ತಂಡದ ವಿರುದ್ಧ ತಮ್ಮ 53 ನೇ ಪ್ರಥಮ ದರ್ಜೆ ಶತಕ ಗಳಿಸಿದ ಜಾಫರ್ ಈ ಮೂಲಕ ಅತೀ ಹಿರಿಯ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ ಐದನೇ ಭಾರತೀಯ ಎಂಬ ದಾಖಲೆ ಮಾಡಿದರು.
224 ರನ್ ಗಳಿಸಿ ಅಜೇಯರಾಗುಳಿದ ಜಾಫರ್ ಗೆ ಮಾಜಿ ನಾಯಕ ಸೌರವ್ ಗಂಗೂಲಿ ಶುಭ ಹಾರೈಸಿದ್ದಾರೆ. ಓಲ್ಡ್ ಮ್ಯಾನ್ ನ ಭರ್ಜರಿ ಇನಿಂಗ್ಸ್ ಎಂದು ಗಂಗೂಲಿ ಕೊಂಡಾಡಿದ್ದಾರೆ. ವಿದರ್ಭ ತಂಡದ ಕೋಚ್ ಕಮ್ ನಾಯಕರಾಗಿರುವ ಜಾಫರ್ ರಣಜಿ ಟ್ರೋಫಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ