Select Your Language

Notifications

webdunia
webdunia
webdunia
webdunia

ಬಾಯ್ಸ್….! ಸ್ವಲ್ಪ ವೈಟ್ ಮಾಡಿ.. ಸದ್ಯದಲ್ಲೇ ರೋಹಿತ್ ಶರ್ಮಾ ತ್ರಿಶತಕ ನಿರೀಕ್ಷಿಸಿ!

ಬಾಯ್ಸ್….! ಸ್ವಲ್ಪ ವೈಟ್ ಮಾಡಿ.. ಸದ್ಯದಲ್ಲೇ ರೋಹಿತ್ ಶರ್ಮಾ ತ್ರಿಶತಕ ನಿರೀಕ್ಷಿಸಿ!
ಮುಂಬೈ , ಬುಧವಾರ, 3 ಜನವರಿ 2018 (09:45 IST)
ಮುಂಬೈ: ಏಕದಿನ ಪಂದ್ಯದಲ್ಲಿ ಮೂರು ಬಾರಿ ದ್ವಿಶತಕ ಸಾಧನೆ ಮಾಡಿದ ಜಗತ್ತಿನ ಏಕೈಕ ಸುಂಟರಗಾಳಿ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಸದ್ಯದಲ್ಲೇ ಮತ್ತೊಂದು ಸ್ಪೋಟಕ ಆಟ ತೋರಿಸಲಿದ್ದಾರಂತೆ!
 

ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿರುವ ರೋಹಿತ್ ಗೆ ತ್ರಿಶತಕದ ಗಡಿಯೇನೂ ದೂರ ಎನಿಸುತ್ತಿಲ್ಲ. ಕೇವಲ 36 ರನ್ ಗಳಿಸಿದರೆ ಅದೂ ಆಗಿ ಬಿಡುತ್ತದೆ. ಅದೇನೂ ಅಸಾಧ್ಯವಲ್ಲ. ನನಗೆ ಅದು ದೊಡ್ಡ ಕತೆಯೇ ಅಲ್ಲ ಎಂದು ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚಕ ಸುದ್ದಿ ಕೊಟ್ಟಿದ್ದಾರೆ.

ರೋಹಿತ್ ಸಿಡಿದರೆ ಅದೆಂತಹಾ ಸಿಡಿಗುಂಡು ಎಂದು ಎದುರಾಳಿಗಳಿಗೆ ಈಗಾಗಲೇ ಅರಿವಾಗಿದೆ. ಆದರೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೋಹಿತ್ ಈ ರೀತಿ ಎಚ್ಚರಿಕೆ ನೀಡಿರುವುದು ನೋಡಿದರೆ ಎದುರಾಳಿಗಳು ಭಯಬೀಳುವುದು ಗ್ಯಾರಂಟಿ.

‘ಬಾಯ್… ಸ್ವಲ್ಪ ದಿನ ತಾಳ್ಮೆಯಿಂದಿರಿ.. ಸದ್ಯದಲ್ಲೇ ತ್ರಿಶತಕವನ್ನೂ ಮಾಡುತ್ತೇನೆ. ಒಬ್ಬ ಆರಂಭಿಕ 50 ಓವರ್ ವರೆಗೆ ಬ್ಯಾಟ್ ಮಾಡಿದರೆ ತ್ರಿಶತಕ ಕಷ್ಟವೇನೂ ಅಲ್ಲ. ಆ ದಿನ ಏನು ಬೇಕಾದರೂ ಸಂಭವಿಸಬಹುದು’ ಎಂದು ರೋಹಿತ್ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.  ದ್ವಿಶತಕಕ್ಕೇ ಸಿಕ್ಸರ್ ಗಳ ಮಳೆ ಸುರಿಸುವ ರೋಹಿತ್ ತ್ರಿಶತಕ ದಾಖಲಿಸುವ ದಿನ ಹೇಗಿರಬಹುದೆಂದು ಊಹಿಸಿಕೊಂಡು ಅಭಿಮಾನಿಗಳು ರೋಮಾಂಚಿತರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಕೆಯಿಂದ ಪಾಠ ಮಾಡಿಸುವ ಬಯಕೆ ಶಾರುಖ್ ಖಾನ್ ಗೆ!