Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಕೆಯಿಂದ ಪಾಠ ಮಾಡಿಸುವ ಬಯಕೆ ಶಾರುಖ್ ಖಾನ್ ಗೆ!

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಕೆಯಿಂದ ಪಾಠ ಮಾಡಿಸುವ ಬಯಕೆ ಶಾರುಖ್ ಖಾನ್ ಗೆ!
ಮುಂಬೈ , ಬುಧವಾರ, 3 ಜನವರಿ 2018 (08:35 IST)
ಮುಂಬೈ: ಮಿಥಾಲಿ ರಾಜ್.. ಭಾರತ ಮಹಿಳಾ ಕ್ರಿಕೆಟ್ ನ ಸಚಿನ್ ತೆಂಡುಲ್ಕರ್ ಎಂದೇ ಫೇಮಸ್ಸು. ಈ ಪ್ರತಿಭಾವಂತ ಕ್ರಿಕೆಟ್ ಆಟಗಾರ್ತಿಯಿಂದ ಒಮ್ಮೆಯಾದರೂ ಟೀಂ ಇಂಡಿಯಾ ಪುರುಷ ಕ್ರಿಕೆಟಿಗರಿಗೆ ಪಾಠ ಮಾಡಿಸುವ ಆಸೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಗಿದೆಯಂತೆ!
 

ಭಾರತ ಮಹಿಳಾ ತಂಡವನ್ನು ಎರಡು ಬಾರಿ ವಿಶ್ವಕಪ್ ಫೈನಲ್ ಗೇರಿಸಿದ್ದಲ್ಲದೆ, ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ರನ್ ಪೇರಿಸಿದ ಮಹಿಳಾ ಆಟಗಾರ್ತಿ ಎಂಬ ಖ್ಯಾತಿಯ ಮಿಥಾಲಿ ಹಲವು ಮಹಿಳಾ ಆಟಗಾರ್ತಿಯರಿಗೆ ಮಾದರಿ.

ಆಕೆ ಒಂದು ದಿನದ ಮಟ್ಟಿಗಾದರೂ ಪುರುಷರ ತಂಡಕ್ಕೆ ಕೋಚ್ ಆಗುವುದನ್ನು ನೋಡಲು ಬಯಸುತ್ತೇನೆ ಎಂದು ಶಾರುಖ್ ಖಾನ್ ಸ್ಟಾರ್ ಪ್ಲಸ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಿಥಾಲಿ ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಉತ್ತರ ಕೊಟ್ಟಿದ್ದು, ‘ನಾನು ಯಾವತ್ತೂ ನನ್ನ ಗರಿಷ್ಠ ಸಾಮರ್ಥ್ಯ ಪ್ರದರ್ಶಿಸಲು ಬಯಸುತ್ತೇನೆ’ ಎಂದಿದ್ದಾರೆ. ಎಲ್ಲಾ ರಂಗದಲ್ಲೂ ಮಹಿಳೆಯರು ಪುರುಷರ ಸರಿ ಸಮನಾಗಿರುವಾಗ ಕ್ರಿಕೆಟ್ ವಿಷಯದಲ್ಲೂ ಆ ದಿನ ಬಹಳ ದೂರವಿರಲಿಕ್ಕಿಲ್ಲ ಎಂದು ಆಶಿಸೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಪತ್ನಿಯ ಕುರಿತು ಹೊಗಳಿದ್ದೇನು ಗೊತ್ತಾ...?