Select Your Language

Notifications

webdunia
webdunia
webdunia
Monday, 21 April 2025
webdunia

ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಪತ್ನಿಯ ಕುರಿತು ಹೊಗಳಿದ್ದೇನು ಗೊತ್ತಾ...?

ರೋಹಿತ್ ಶರ್ಮಾ
ಬೆಂಗಳೂರು , ಬುಧವಾರ, 3 ಜನವರಿ 2018 (07:36 IST)
ಬೆಂಗಳೂರು : ಟೀಂ ಇಡಿಯಾದ ಆಟಗಾರ ರೋಹಿತ್ ಶರ್ಮಾ ಅವರು ತನ್ನ ಪತ್ನಿ ರಿತಿಕಾ ಅವರು ತನ್ನ ಪಾಲಿನ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ.


ಕ್ರಿಕೆಟ್ ಪ್ರವಾಸಗಳ ವೇಳೆ ರಿತಿಕಾ ಅವರು ಪತಿ ರೋಹಿತ್ ಅವರ ಜೊತೆ ಪ್ರಯಾಣಿಸುತ್ತಿರುತ್ತಾರೆ . ವೃತ್ತಿಯಲ್ಲಿ ಆಕೆ ಸ್ಪೋರ್ಟ್ಸ್ ಇವೆಂಟ್ ಮ್ಯಾನೆಜರ್ ಆಗಿದ್ದು, ರೋಹಿತ್ ಅವರಿಗೆ ಕ್ರಿಕೆಟಿಗೆ ಸಂಬಂಧಿಸಿದಂತೆ ಸಂಪೂರ್ಣ ಸಹಕಾರ ನೀಡುತ್ತಿದರು. ಅವರನ್ನು ಭಾರತ ತಂಡದ 17ನೇ ಆಟಗಾರ್ತಿ ಎಂದು ಸಾಮಾಜಿಕ ತಾಣಗಳಲ್ಲಿ ಕೆಲವರು ಬರೆದಿದ್ದು,ಈ ಬಗ್ಗೆ ಸಂದರ್ಶನವೊಂದರಲ್ಲಿ ರೋಹಿತ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದರು. ‘ಅದು ನಿಜಕ್ಕೂ ತಮಾಷೆಯ ಸಂಗತಿ. ನಾನೂ ಆ ಬಗ್ಗೆ ಕೇಳಿದ್ದೇನೆ. ನನ್ನದು ಮತ್ತು ಆಕೆಯದ್ದು ಅದ್ಭುತ ತಂಡ. ಆಕೆ ನನ್ನ ಪಾಲಿಗೆ ಪತ್ನಿ , ಸ್ನೇಹಿತೆ, ಮ್ಯಾನೇಜರ್ ಹಾಗು ಎಲ್ಲವೂ ಆಗಿದ್ದಾಳೆ. ಆಕೆ ನನ್ನ ಜೊತೆ ಇರುವುದರಿಂದ ಮೈದಾನದಲ್ಲಿ ನಾನು ಸ್ವತಂತ್ರವಾಗಿ ನನ್ನ ಆಟವನ್ನು ಆಡಲು ಸಾಧ್ಯವಾಗುತ್ತಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೊಚ್ಚಲ ರಣಜಿ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡ ವಿದರ್ಭ