Publish Date: Thu, 28 Dec 2017 (08:33 IST)
Updated Date: Thu, 28 Dec 2017 (08:35 IST)
ಮುಂಬೈ: ಕ್ರಿಕೆಟ್ ನ ಆಂಗ್ರಿ ಯಂಗ್ ಮ್ಯಾನ್ ಗೆ ಇದೀಗ ಕಡಿವಾಣ ಬಿದ್ದಿದೆ. ಬಹುಕಾಲದ ಗೆಳತಿ ಅನುಷ್ಕಾ ಜತೆ ಕೈ ಹಿಡಿದ ಮೇಲಾದ್ರೂ ಕೊಹ್ಲಿ ಬದಲಾಗ್ತಾರಾ? ಹೀಗೊಂದು ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರಿಸಿದ್ದಾರೆ.
ಮದುವೆಯಾದ ಮೇಲೆ ಎಲ್ಲರೂ ಬದಲಾಗ್ತಾರೆ ಎಂಬ ಮಾತಿದೆ. ಅದರಂತೆ ಕೊಹ್ಲಿ ಕೂಡಾ ಮೈದಾನದಲ್ಲಿ ತಾವು ತೋರುವ ಅತಿಯಾದ ಆಕ್ರಮಣಕಾರಿ ವರ್ತನೆಯನ್ನು ಕಡಿಮೆ ಮಾಡುತ್ತಾರಾ? ಅವರ ಮುಂಗೋಪ ಕಡಿಮೆಯಾಗುತ್ತಾ?
ಹೀಗೊಂದು ಪ್ರಶ್ನೆಯನ್ನು ರೋಹಿತ್ ಶರ್ಮಾಗೆ ಕೇಳಿದಾಗ ಅವರು ‘ಏನೂ ಹೇಳಕ್ಕಾಗಲ್ಲ. ಮದುವೆ ಒಂದು ಪ್ರಮುಖ ಘಟ್ಟ ನಿಜ. ಆದರೆ ಕೊಹ್ಲಿ ಕೋಪ ಕಡಿಮೆಯಾಗುತ್ತಾ ಎಂದು ದ. ಆಫ್ರಿಕಾ ಪ್ರವಾಸದ ನಂತರವೇ ಹೇಳಬಹುದಷ್ಟೇ’ ಎಂದು ತಮಾಷೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ