Publish Date: Thu, 28 Dec 2017 (08:28 IST)
Updated Date: Thu, 28 Dec 2017 (08:29 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊನ್ನೆ ಸಂಜೆ ತಮ್ಮ ಆಪ್ತರಿಗಾಗಿ ಮುಂಬೈನಲ್ಲಿ ಏರ್ಪಡಿಸಿದ್ದ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಎಲ್ಲರೂ ಬಂದಿದ್ದರೂ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬಂದಿರಲಿಲ್ಲ. ಯಾಕೆ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಹಾರ್ದಿಕ್ ಪಾಂಡ್ಯ ಸಹೋದರ ಹಾಗೂ ಮುಂಬೈ ಇಂಡಿಯನ್ಸ್ ಆಟಗಾರ ಕೃನಾಲ್ ಪಾಂಡ್ಯ ಮದುವೆಯ ಮೆಹಂದಿ ಕಾರ್ಯಕ್ರಮ ಅದೇ ದಿನ ನಿಗದಿಯಾಗಿತ್ತು. ಇದೇ ಕಾರಣಕ್ಕೆ ಹಾರ್ದಿಕ್ ತಮ್ಮ ಕ್ಯಾಪ್ಟನ್ ನೀಡಿದ್ದ ಆರತಕ್ಷತೆ ಪಾರ್ಟಿ ತಪ್ಪಿಸಿಕೊಂಡಿದ್ದರು.
ಹಾರ್ದಿಕ್ ತಮ್ಮ ಸಹೋದರನ ಆರತಕ್ಷತೆ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ