Publish Date: Wed, 27 Dec 2017 (09:50 IST)
Updated Date: Wed, 27 Dec 2017 (09:55 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ನಿನ್ನೆ ತಮ್ಮ ಆಪ್ತ ಬಳಗದವರಿಗಾಗಿ ಮುಂಬೈನಲ್ಲಿ ವಿವಾಹ ಆರತಕ್ಷತೆ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರ ಸಮಾಗಮ ನಡೆದಿತ್ತು. ಎರಡೂ ಕ್ಷೇತ್ರದ ಘಟಾನುಘಟಿಗಳೇ ಆಗಮಿಸಿದ್ದರು. ಕಣ್ಣು ಕೋರೈಸುವ ಸಮಾರಂಭದಲ್ಲಿ ಆಧುನಿಕ ಶೈಲಿಯ ಉಡುಗೆ ತೊಟ್ಟಿದ್ದ ವಿರುಷ್ಕಾ ಜೋಡಿ ನೋಡುಗರ ಮನಸೂರೆಗೊಂಡಿತ್ತು.
ಬಾಲಿವುಡ್ ವಲಯದಿಂದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ರಣಬೀರ್ ಕಪೂರ್, ಕತ್ರಿನಾ ಕೈಫ್, ನೀತಾ ಅಂಬಾನಿ ಮತ್ತಿತ್ತರು ಆಗಮಿಸಿದ್ದರು.
ಇನ್ನು, ಕ್ರಿಕೆಟಿಗರ ಪೈಕಿ ಶಿಖರ್ ಧವನ್, ರವೀಂದ್ರ ಜಡೇಜಾ, ಧೋನಿ, ಸಾಕ್ಷಿ ಧೋನಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಜಹೀರ್ ಖಾನ್, ಸಾಗರಿಕಾ ಘಾಟೆ, ಮತ್ತಿತರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ