ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ ಕ್ರಿಕೆಟಿಗರು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗುವುದು ಹೊಸತೇನಲ್ಲ. ಇದೀಗ ಮತ್ತೊಮ್ಮೆ ಮೊಹಮ್ಮದ್ ಕೈಫ್ ಸಂಪ್ರದಾಯವಾದಿಗಳ ಕಿಡಿಗೆ ಪಾತ್ರರಾಗಿದ್ದಾರೆ.
 
ಅದಕ್ಕೆ ಕಾರಣ ಕೈಫ್ ತಮ್ಮ ಪತ್ನಿ, ಮಕ್ಕಳ ಜತೆಗೆ ಕ್ರಿಸ್ ಮಸ್ ಹಬ್ಬ ಆಚರಿಸಿ ಆ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವುದು. ಇದು ಇಸ್ಲಾಂ ಧರ್ಮದಲ್ಲಿ ನ್ಯಾಯ ಸಮ್ಮತವಲ್ಲ ಎನ್ನುವುದು ಸಂಪ್ರದಾಯವಾದಿಗಳ ವಾದ.
									
			
			 
 			
 
 			
			                     
							
							
			        							
								
																	ಇದರ ವಿರುದ್ಧ ಕಿಡಿಕಾರಿರುವ ಸಂಪ್ರದಾಯವಾದಿಗಳು, ‘ಇಂತಹ ಇಸ್ಲಾಂ ವಿರೋಧಿ ಕೆಲಸ ಮಾಡಿದ ನಿನಗೆ ಅಂತಿಂಥಾ ಸಾವು ಬರದು’ ಎಂದು ಕೆಲವರು ಹಿಡಿಶಾಪ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಸೂರ್ಯ ನಮಸ್ಕಾರ ಮಾಡಿದ ತಪ್ಪಿಗೆ ಮೊಹಮ್ಮದ್ ಕೈಫ್ ಇದೇ ರೀತಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ