Publish Date: Tue, 26 Dec 2017 (09:52 IST)
Updated Date: Tue, 26 Dec 2017 (09:54 IST)
ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿಕೆ ಕೆಲವೊಮ್ಮೆ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತದೆ. ಈ ಬಾರಿ ಟಿ20 ಕ್ರಿಕೆಟ್ ಬಗ್ಗೆ ಏನೋ ಹೇಳಲು ಹೋಗಿ ರವಿಶಾಸ್ತ್ರಿ ಅಭಿಮಾನಿಗಳಿಂದು ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಭಾನುವಾರದ ಪಂದ್ಯ ಗೆದ್ದ ಬಳಿಕ ಮಾತನಾಡಿದ್ದ ರವಿಶಾಸ್ತ್ರಿ ‘ಟಿ20 ಕ್ರಿಕೆಟ್ ನಮಗೆ ದೊಡ್ಡ ವಿಷಯವಲ್ಲ. ನಾವು ಗೆದ್ದರೂ, ಸೋತರೂ ಅದನ್ನು ಕೇರ್ ಮಾಡಲ್ಲ. ನಮಗೆ ಇದು 2019 ರ ವಿಶ್ವಕಪ್ ಗೆ ಪ್ರತಿಭಾವಂತರನ್ನು ಹುಡುಕುವ ವೇದಿಕೆಯಷ್ಟೇ’ ಎಂದು ಕೇವಲವಾಗಿ ಮಾತನಾಡಿದ್ದರು.
ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಒಬ್ಬ ರಾಷ್ಟ್ರೀಯ ತಂಡದ ಕೋಚ್ ಆಗಿ ಹೀಗೆ ಹೇಳಲು ಹೇಗೆ ಸಾಧ್ಯ? ಇದು ದುರಹಂಕಾರಿ ಹೇಳಿಕೆ ಎಂದು ಶಾಸ್ತ್ರಿಗೆ ಜಾಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ