Publish Date: Sat, 23 Dec 2017 (09:08 IST)
Updated Date: Sat, 23 Dec 2017 (09:09 IST)
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮದುವೆ ನಿಮಿತ್ತ ನವದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಿದ್ದರು. ಈ ರಿಸೆಪ್ಷನ್ ಫೋಟೋಗಳ ಮಧ್ಯೆ ಅನುಷ್ಕಾ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡ ಫೋಟೋ ಒಂದು ಗಮನ ಸೆಳೆದಿದೆ.
ಅಷ್ಟಕ್ಕೂ ಅನುಷ್ಕಾ ತೊಡೆ ಮೇಲೆ ಮಲಗಿದ್ದ ಆ ಕಂದಮ್ಮ ಯಾರು ಗೊತ್ತಾ? ವಿರಾಟ್ ಕೊಹ್ಲಿ ಸ್ನೇಹಿತ ಕ್ರಿಕೆಟಿಗ ಶಿಖರ್ ಧವನ್ ಪುತ್ರ ಝೊರಾವರ್. ಶಿಖರ್ ಧವನ್ ಪುತ್ರನ ಜತೆಗೆ ಕೊಹ್ಲಿ ಕ್ರಿಕೆಟ್ ಪ್ರವಾಸದ ಸಂದರ್ಭದಲ್ಲೆಲ್ಲಾ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ.
ಆದರೆ ರಿಸೆಪ್ಷನ್ ದಿನ ಮದುಮಗಳು ಅನುಷ್ಕಾ ತೊಡೆಯಲ್ಲಿ ಝೊರಾವರ್ ನಿದ್ದೆ ಹೋಗಿರುವ ಫೋಟೋವನ್ನು ಧವನ್ ಪತ್ನಿ ಆಯೆಷಾ ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ