ನವದೆಹಲಿ: ಟೀಂ ಇಂಡಿಯಾಕ್ಕೆ ಈ ವರ್ಷ ಸುಗ್ಗಿಕಾಲ. ಜನವರಿಯಿಂದ ಡಿಸೆಂಬರ್ ವರೆಗೆ ಆಡಿದ ಎಲ್ಲಾ ಟೂರ್ನಿಗಳಲ್ಲೂ ಗೆಲುವೊಂದನ್ನೇ ಕಂಡಿದೆ. ಸೋಲು ಹತ್ತಿರವೂ ಸುಳಿದಿಲ್ಲ.
ಇದೀಗ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲೂ ಸರಣಿ ಗೆಲುವಿನೊಂದಿಗೆ ಈ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಮೂಲಕ ಹೊಸ ದಾಖಲೆಯನ್ನೂ ಮಾಡಿದೆ.
ಇಡೀ ವರ್ಷ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಸರಣಿಗಳಲ್ಲಿ ಒಂದೇ ಒಂದು ಸರಣಿ ಸೋಲು ಕಾಣದೆ ದಾಖಲೆ ಮಾಡುವ ಮೂಲಕ ಈ ವರ್ಷಕ್ಕೆ ಟೀಂ ಇಂಡಿಯಾ ಶುಭವಿದಾಯ ಹೇಳಿದೆ.
ಈ ವರ್ಷ ಟೀಂ ಇಂಡಿಯಾ ಒಟ್ಟು ಐದು ಟೆಸ್ಟ್ ಸರಣಿ, ನಾಲ್ಕು ಏಕದಿನ ಸರಣಿ ಮತ್ತು ನಾಲ್ಕು ಟಿ20 ಸರಣಿ ಆಡಿದೆ. ಇವೆಲ್ಲದರಲ್ಲೂ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿ ದಾಖಲೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ