Publish Date: Fri, 22 Dec 2017 (11:49 IST)
Updated Date: Fri, 22 Dec 2017 (11:52 IST)
ಕಟಕ್: ಮಹೇಂದ್ರ ಸಿಂಗ್ ಧೋನಿ ಎಂದರೆ ಕ್ಯಾಪ್ಟನ್ ಕೂಲ್ ಎಂದೇ ಜನಪ್ರಿಯ. ಅವರು ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಆದರೆ ಶ್ರೀಲಂಕಾ ವಿರುದ್ಧ ಪ್ರಥಮ ಟಿ20 ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.
ಆಗ ಕ್ರೀಸ್ ನಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬ್ಯಾಟಿಂಗ್ ಮಾಡುತ್ತಿದ್ದರು. ಧೋನಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದರು. ಈ ಸಂದರ್ಭದಲ್ಲಿ ಸೈಟ್ ಸ್ಕ್ರೀನ್ ಗೆ ಅಡ್ಡಲಾಗಿ ಓರ್ವ ಕ್ಯಾಮರಾಮೆನ್ ತಮ್ಮ ಕ್ಯಾಮರಾ ಹಿಡಿದುಕೊಂಡು ಪರ್ಫೆಕ್ಟ್ ಫೋಟೋಗಾಗಿ ಕಾದು ನಿಂತಿದ್ದರು.
ಆದರೆ ಕ್ಯಾಮರಾ ಮೆನ್ ನಿಂದಾಗಿ ಮನೀಶ್ ಗೆ ಸೈಟ್ ಸ್ಟ್ರೀನ್ ಗೆ ಅಡ್ಡವಾಗಿ ತೊಂದರೆಯಾಗುತ್ತಿತ್ತು. ಮನೀಶ್ ಆತನನ್ನು ಸರಿಯುವಂತೆ ಹೇಳಿದರೂ ಆ ಫೋಟೋಗ್ರಾಫರ್ ಕದಲದೇ ನಿಂತಿದ್ದರು. ಎಷ್ಟು ಹೇಳಿದರೂ ಫೋಟೋಗ್ರಾಫರ್ ಕೇಳದೇ ಇದ್ದಾಗ ಧೋನಿ ಸಿಟ್ಟು ನೆತ್ತಿಗೇರಿತ್ತು.
ನೇರವಾಗಿ ಸೈಟ್ ಸ್ಕ್ರೀನ್ ಬಳಿಗೆ ನಡೆದ ಧೋನಿ ಆತನ ಬಳಿ ಬದಿಗೆ ಸರಿಯಲು ಹೇಳಿದರು. ಧೋನಿ ಕೋಪದಿಂದ ಬರುತ್ತಿರುವುದನ್ನು ನೋಡಿದ ಫೋಟೋಗ್ರಾಫರ್ ಸರ ಸರನೆ ಸ್ಥಳದಿಂದ ಕ್ಯಾಮರಾ ಸಮೇತ ಜಾಗ ಖಾಲಿ ಮಾಡಿದರು. ಧೋನಿಯೂ ಮರಳಿ ಸ್ವ ಸ್ಥಾನಕ್ಕೆ ಬಂದು ಆಟ ಮುಂದುವರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ