Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾಗೆ ಪ್ರಥಮ ಚುಂಬನವೇ ಸಕ್ಸಸ್!

ರೋಹಿತ್ ಶರ್ಮಾಗೆ ಪ್ರಥಮ ಚುಂಬನವೇ ಸಕ್ಸಸ್!
ಕಟಕ್ , ಗುರುವಾರ, 21 ಡಿಸೆಂಬರ್ 2017 (08:26 IST)
ಕಟಕ್: ಇದೇ ಮೊದಲ ಬಾರಿಗೆ ಟಿ20 ಪಂದ್ಯದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾಗೆ ಮೊದಲ ಚುಂಬನದಲ್ಲೇ ಯಶಸ್ಸು ಸಿಕ್ಕಿದೆ. ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿದೆ.
 

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 180 ರನ್ ಪೇರಿಸಿತು. ರಾಹುಲ್ 48 ಎಸೆತಗಳಿಂದ 61 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಂಕಾ 16 ಓವರ್ ಗಳಲ್ಲಿ 87 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಯಜುವೇಂದ್ರ ಚಾಹಲ್ 4 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರು. ಉಪುಲ್ ತರಂಗಾ ಮಾತ್ರ 23 ರನ್ ಗಳಿಸಿ ಲಂಕಾ ಪರ ಅತ್ಯಧಿಕ ರನ್ ಮಾಡಿದ ಕೀರ್ತಿಗೆ ಪಾತ್ರರಾದರು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ಟಿ20 ಪಂದ್ಯ: ಯಾರು ಇನ್? ಯಾರು ಔಟ್!