Publish Date: Sat, 23 Dec 2017 (07:48 IST)
Updated Date: Sat, 23 Dec 2017 (07:55 IST)
ಮೆಲ್ಬೋರ್ನ್: ಈಗಿನ ಟೆಸ್ಟ್ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ಶ್ರೇಷ್ಠ ಬ್ಯಾಟ್ಸ್ ಮನ್ ಗಳಾಗಿದ್ದಾರೆ. ಆದರೆ ಸ್ಮಿತ್ ಭಾರತದ ನಾಯಕ ವಿರಾಟ್ ಕೊಹ್ಲಿಗಿಂತ ಶ್ರೇಷ್ಠ ಟೆಸ್ಟ್ ಆಟಗಾರರಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಶೇನ್ ವಾರ್ನ್ ಅಭಿಪ್ರಾಯಟ್ಟಿದ್ದಾರೆ.
ವಾರ್ನ್ ತಾನು ಆಡಿರುವ ಹಾಗೂ ನೋಡಿರುವ ಅಗ್ರ-11 ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಮಿತ್ ಅವರು ಕೊಹ್ಲಿ ಅವರೊಂದಿಗೆ 10ನೇ ಸ್ಥಾನ ಹಂಚಿಕೊಂಡಿದ್ದಾರೆ.
‘ನನ್ನ ಪ್ರಕಾರ ಸ್ಮಿತ್ ವಿಶ್ವದ ಶ್ರೇಷ್ಠ ಟೆಸ್ಟ್ ಆಟಗಾರ. ವಿರಾಟ್ ಕೊಹ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಉತ್ತಮ ಆಟಗಾರನಾಗಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಮಿತ್ ಶ್ರೇಷ್ಠ ಆಟಗಾರರಾಗಿದ್ದಾರೆ’ ಎಂದಿದ್ದಾರೆ ವಾರ್ನ್
ಕೊಹ್ಲಿ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಸ್ಮಿತ್ ಇಂಗ್ಲೆಂಡ್ ನಲ್ಲಿ ಆ್ಯಶಸ್ ಸರಣಿಯಲ್ಲಿ 3 ಶತಕ ಗಳಿಸಿದ್ದಾರೆ. ಈ ಪ್ರದರ್ಶನವನ್ನು ಆಧರಿಸಿ ವಾರ್ನ್ ಸ್ಮಿತ್-ಕೊಹ್ಲಿಯನ್ನು ಹೋಲಿಕೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ