Publish Date: Mon, 01 Jan 2018 (10:28 IST)
Updated Date: Mon, 01 Jan 2018 (10:30 IST)
ಮುಂಬೈ: ರೋಹಿತ್ ಶರ್ಮಾ ಮೂರನೇ ಏಕದಿನ ದ್ವಿಶತಕ ಭಾರಿಸಿದ ಮೇಲೆ ಪತ್ನಿ ರಿತಿಕಾ ಜತೆಗಿನ ಪ್ರೀತಿಯನ್ನು ಬಹಿರಂಗವಾಗಿಯೇ ಹೊರ ಹಾಕಿದ್ದರು. ಆದರೆ ಈ ಇಬ್ಬರು ಕ್ಯೂಟ್ ಜೋಡಿಯ ಮೇಲೆ ಒಂದು ಕಾಲದಲ್ಲಿ ಯುವರಾಜ್ ಸಿಂಗ್ ವಿಲನ್ ಆಗಿದ್ದರಂತೆ!
ಹಾಗಂತ ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್ ‘ಒಂದು ಜಾಹೀರಾತು ಶೂಟಿಂಗ್ ಗಾಗಿ ನಾನು ಹಾಜರಾಗಿದ್ದೆ. ಅಲ್ಲಿ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಇದ್ದರು. ಆಗಲೇ ಯುವಿಯನ್ನು ನಾನು ಮೊದಲು ನೋಡಿದ್ದು. ಆ ಶೂಟಿಂಗ್ ಮ್ಯಾನೇಜ್ ಮಾಡುತ್ತಿದ್ದಿದ್ದು ರಿತಿಕಾ. ಆಗ ಯುವಿ ಪಾಜಿಗೆ ಹಾಯ್ ಎಂದೆ. ಆದರೆ ಯುವಿ ರಿತಿಕಾ ಕಡೆಗೆ ತೋರಿಸಿ ನೋಡು, ಆಕೆ ನನ್ನ ಸಹೋದರಿ. ಯಾವುದೇ ಕಾರಣಕ್ಕೂ ಆಕೆ ಕಡೆ ಕಣ್ಣೆತ್ತಿಯೂ ನೋಡಬೇಡ ಎಂದು ಎಚ್ಚರಿಕೆ ನೀಡಿದ್ದರು’ ಎಂದು ರೋಹಿತ್ ವಿವರಿಸಿದ್ದಾರೆ.
ಹಾಗಿದ್ದರೂ ಪ್ರೀತಿ ಮುಂದೆ ಇಂತಹ ಎಚ್ಚರಿಕೆಗಳೆಲ್ಲಾ ಕೆಲಸ ಮಾಡುತ್ತಾ? ರೋಹಿತ್ ಜೀವನದಲ್ಲೂ ಅದೇ ಆಯಿತು. ಇದಾದ ಬಳಿಕ ಆ ಜಾಹೀರಾತು ಶೂಟಿಂಗ್ ನಲ್ಲಿ ರಿತಿಕಾ ಕಡೆಗೆ ಗುರಾಯಿಸುತ್ತಲೇ ಶೂಟ್ ಮಾಡಿದರಂತೆ ರೋಹಿತ್. ಆದರೆ ಕೊನೆಗೆ ರಿತಿಕಾ ನಿಮಗೆ ಏನಾದರೂ ಸಹಾಯ ಬೇಕಿದ್ದರೆ ನನಗೆ ಹೇಳಿ ಎಂದು ಪ್ರೀತಿಯಿಂದ ಹೇಳಿದಾಗ ರೋಹಿತ್ ಕರಗಿದರಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ