Publish Date: Thu, 15 Mar 2018 (09:25 IST)
Updated Date: Thu, 15 Mar 2018 (09:28 IST)
ಮುಂಬೈ: ಮೈದಾನದಲ್ಲಿರುವಾಗ ಚುರಕಾಗಿ ಓಡಿ ರನ್ ಗಳಿಸುವ ವಿರಾಟ್ ಕೊಹ್ಲಿ ಮನೆಯಲ್ಲಿದ್ದಾಗ ಅಷ್ಟೇ ಸೋಂಬೇರಿ ಅಂತೆ. ಅವರು ಅದೆಷ್ಟು ಸೋಮಾರಿ ಎಂದು ಅವರೇ ಹೇಳಿದ್ದಾರೆ ನೋಡಿ.
ಮನೆಯಲ್ಲಿದ್ದಾಗ ನಾನು ಎಷ್ಟು ಸೋಂಬೇರಿ ಎಂದರೆ ಒಂದು ಕಡೆ ಕೂತರೆ ಎದ್ದು ಇನ್ನೊಂದು ಕಡೆ ನಡೆದಾಡಲೂ ಉದಾಸೀನ ಬಿಡಲ್ಲ. ಒಂದೇ ಕಡೆ ಕೂತಿರುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಹಸಿವಾದಾಗ ಒಮ್ಮೆ ತರಕಾರಿ ಖಾದ್ಯಗಳನ್ನು ಸೇವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಸದ್ಯಕ್ಕೆ ಬಿಡುವಿನ ವೇಳೆ ಅನುಭವಿಸುತ್ತಿರುವ ಕೊಹ್ಲಿ ಮುಂಬೈನ ತಮ್ಮ ಫ್ಲ್ಯಾಟ್ ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಜಾಲಿಯಾಗಿ ಕಾಲ ಕಳೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ