Select Your Language

Notifications

webdunia
webdunia
webdunia
webdunia

ಅಂತೂ ಇಂತೂ ರೋಹಿತ್ ಶರ್ಮಾ ಕಳೆದುಕೊಂಡಿದ್ದನ್ನು ಮರಳಿ ಪಡೆದರು!

ಅಂತೂ ಇಂತೂ ರೋಹಿತ್ ಶರ್ಮಾ ಕಳೆದುಕೊಂಡಿದ್ದನ್ನು ಮರಳಿ ಪಡೆದರು!
ಕೊಲೊಂಬೊ , ಗುರುವಾರ, 15 ಮಾರ್ಚ್ 2018 (08:58 IST)
ಕೊಲೊಂಬೊ: ತ್ರಿಕೋನ್ ಟಿ 20 ಸರಣಿಯ  ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಫೈನಲ್ಸ್ ಪ್ರವೇಶಿಸಿದೆ.
 

ಈ ಪಂದ್ಯದಲ್ಲಿ ರೋಹಿತ್ ತಮ್ಮ ಎಂದಿನ ಫಾರ್ಮ್ ಪ್ರದರ್ಶಿಸಿದರು. ಇದರೊಂದಿಗೆ ಇದುವರೆಗೆ ಫಾರ್ಮ್ ಕಳೆದುಕೊಂಡು ಮಂಕಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮರಳಿ ಲಯಕ್ಕೆ ಬಂದರು. ಒಟ್ಟಾರೆ ಅವರು 5 ಸಿಕ್ಸರ್ ಗಳ ಸಹಿತ 61 ಬಾಲ್ ಗಳಲ್ಲಿ 89 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಶಿಖರ್ ಧವನ್ 27 ಬಾಲ್ ಗಳಲ್ಲಿ 35 ರನ್ ಸಿಡಿಸಿದರು. ಈ ಜೋಡಿ 10 ಓವರ್ ಗಳಲ್ಲೇ 105 ರನ್ ಸಿಡಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಈ ವೇಳೆ ಧವನ್ ವಿಕೆಟ್ ಬಿತ್ತು.

ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಸುರೇಶ್ ರೈನಾ 30 ಎಸೆತಗಳಲ್ಲಿ 47 ರನ್ ಸಿಡಿಸಿ ಔಟಾದರು. ಬಾಂಗ್ಲಾ ಪರ ರುಬೇಲ್ ಹಸನ್ 2 ವಿಕೆಟ್ ಕಿತ್ತರು. ಅಂತೂ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 176 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಬಿಸಿದ ಬಾಂಗ್ಲಾ ಆರಂಭ ಉತ್ತಮವಾಗಿರಲಿಲ್ಲ. ಕೆಳ ಕ್ರಮಾಂಕದಲ್ಲಿ ಬಂದ ಮುಷ್ಪಿಕರ್ ರೆಹಮಾ್ನ 55 ಎಸೆತಗಳಲ್ಲಿ 77 ರನ್ ಸಿಡಿಸಿ ಅಪಾಯಕಾರಿಯಾದರು. ಆದರೆ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ. ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಕಬಳಿಸಿದರು. ಅಂತೂ ಬಾಂಗ್ಲಾ ನಿಗದಿತ 20 ಓವರ್ ಗಳಲ್ಲಿ 159 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ