Publish Date: Wed, 14 Mar 2018 (09:18 IST)
Updated Date: Wed, 14 Mar 2018 (09:24 IST)
ರಾಂಚಿ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ವಿರಾಮ ಪಡೆದಿರುವ ಕ್ರಿಕೆಟಿಗ ಧೋನಿ ಫ್ಯಾಮಿಲಿ ಟೈಮ್ ನ್ನು ಚೆನ್ನಾಗಿಯೇ ಕಳೆಯುತ್ತಿದ್ದಾರೆ.
ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸುಂದರ ಕ್ಷಣಗಳ ವಿಡಿಯೋ ಒಂದನ್ನು ಧೋನಿ ಪ್ರಕಟಿಸಿದ್ದಾರೆ. ಇದರಲ್ಲಿ ಧೋನಿ ತಮ್ಮ ಪತ್ನಿ ಸಾಕ್ಷಿ ಸಿಂಗ್, ಮಗಳು ಜೀವಾ ಹಾಗೂ ಮೆಚ್ಚಿನ ನಾಯಿಗಳೂ ಇದ್ದಾರೆ.
ವಿಶೇಷವೆಂದರೆ ಶ್ವಾನ ಪ್ರಿಯ ಧೋನಿ ತಮ್ಮ ನಾಯಿಗಳಿಗೂ ಚೆನ್ನಾಗಿಯೇ ಬಾಲ್ ಹಿಡಿಯಲು ಪ್ರಾಕ್ಟೀಸ್ ಕೊಟ್ಟಿದ್ದಾರೆ. ಅಂತೂ ಕ್ರಿಕೆಟ್ ನ ಒತ್ತಡವಿಲ್ಲದೇ ಫಾರ್ಮ್ ಹೌಸ್ ನಲ್ಲಿ ಆರಾಮವಾಗಿದ್ದಾರೆ ಧೋನಿ ಆಂಡ್ ಫ್ಯಾಮಿಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ