ರಾಜಮೌಳಿ ಸಿನಿಮಾದಲ್ಲಿ ನಟಿಸಲು ಸಮಂತಾ ನೋ ಎಂದಿದ್ದು ಈ ಕಾರಣಕ್ಕಾಗಿಯಂತೆ

ಶನಿವಾರ, 28 ಜುಲೈ 2018 (06:23 IST)
ಹೈದರಾಬಾದ್ : ನಟಿ ಸಮಂತಾ ಅವರಿಗೆ  ಖ್ಯಾತ ನಿರ್ದೇಶಕರಾದ ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದ್ದರೂ ಕೂಡ ಅದಕ್ಕೆ ಅವರು ನೋ ಎಂದಿದ್ದಾರಂತೆ.


ಹೌದು. ಬಾಹುಬಲಿ ಸಿನಿಮಾದ ನಂತರ ರಾಜಮೌಳಿ ನಟ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯ ಹುಡುಕಾಟ ಪ್ರಕ್ರಿಯೆ ನಡೆಯುತ್ತಿದ್ದು, ಆಗ ನಟಿ ಸಮಂತಾ ಅವರನ್ನು ಆಯ್ಕೆ ಮಾಡಲಾಗಿದೆಯಂತೆ.


ಸೂಪರ್ ಹಿಟ್ ಬಾಹುಬಲಿ ಸಿನಿಮಾವನ್ನು ನಿರ್ದೇಶಿಸಿದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಸಾಕು ಅಂತ ನಟಿಯರು ತುದಿಗಾಲಿನಲ್ಲಿ ನಿಂತಿರುವಾಗ ನಟಿ ಸಮಂತಾ ಅವರು ಮಾತ್ರ ಒಲ್ಲೆ ಎಂದಿದ್ದಾರಂತೆ. ಕಾರಣ ಕೆಲವು ತಿಂಗಳುಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಸಮಂತಾ ಈಗ ಮಗು ಪಡೆಯಬೇಕೆಂಬ ಇಚ್ಚೆಯಲ್ಲಿದ್ದಾರಂತೆ, ಆದ್ದರಿಂದ ರಾಜಮೌಳಿಯ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ ಎಂಬ ಮಾತು ಇದೀಗ ಕೇಳಿಬರುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸದ್ದಿಲ್ಲದೇ ನಿಕ್ ಜೊನಾಸ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರಾ ಪ್ರಿಯಾಂಕಾ ಚೋಪ್ರಾ?