Publish Date: Fri, 27 Jul 2018 (16:50 IST)
Updated Date: Fri, 27 Jul 2018 (16:52 IST)
ವೃತ್ತಿ ಜೀವನಕ್ಕಿಂತ ವೈಯುಕ್ತಿಕ ವಿಚಾರಗಳಿಗೆ ಹೆಸರಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ಹೊಸ ಸುದ್ದಿಯನ್ನು ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಮಿಂಚಿದ ಪ್ರಿಯಾಂಕಾ ಕಳೆದ ಕೆಲವು ತಿಂಗಳಿಂದ ಹಾಲಿವುಡ್ ಗಾಯಕ ನಿಕ್ ಜೋನಸ್ ಜೊತೆ ಡೇಟ್ ಮಾಡುತ್ತಿರುವ ಸುದ್ದಿ ಹರಡುತ್ತಿತ್ತು. ಆದರೆ ಇದೀಗ ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ಲಂಡನ್‌ನಲ್ಲಿ ನಿಶ್ಚಿತಾರ್ಥದ ಉಂಗುರವನ್ನು ಖರೀದಿಸಲು ನಿಕ್ ಇಡೀ ಟಿಫಾನಿ ಅಂಗಡಿಯನ್ನು ಮುಚ್ಚಿಸಿದ್ದರು ಎಂಬ ವರದಿ ಆಗಿತ್ತು. ಪ್ರಿಯಾಂಕಾ ಅವರ 36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಿಕ್ ಜೋನಾಸ್ ನಿಶ್ಚಿತಾರ್ಥದ ಉಂಗುರವನ್ನು ಮುಂದಿಟ್ಟು ಮಂಡಿಯೂರಿ ಕುಳಿತು ಪ್ರೊಪೋಸ್ ಮಾಡಿದ್ದಾರಂತೆ.
ನಿಕ್ ಜೊನಾಸ್‌ಗಿಂತ 11 ವರ್ಷ ದೊಡ್ಡವರಾದ ಪ್ರಿಯಾಂಕಾ ಇನ್ನೊಂದು ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.
ಪ್ರಿಯಾಂಕಾ ನಿಶ್ಚಿತಾರ್ಥ ಆಗಿರುವ ವಿಚಾರ ಮತ್ತು ಇನ್ನೂ ಮುಂದೆ ಪ್ರಿಯಾಂಕಾ ಭಾರತ ಫಿಲಂ ಕಂಪನಿಯ ಭಾಗಿವಾಗಿರುವುದಿಲ್ಲ ಎಂದು ಬಾಲಿವುಡ್‌ನ ಖ್ಯಾತ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ.