Select Your Language

Notifications

webdunia
webdunia
webdunia
webdunia

ಸಂಜು ಚಿತ್ರಕ್ಕೆ ಭೂಗತ ಪಾತಕಿ ಅಬು ಸಲೀಂನಿಂದ ವಿರೋಧ

ಸಂಜು ಚಿತ್ರಕ್ಕೆ ಭೂಗತ ಪಾತಕಿ ಅಬು ಸಲೀಂನಿಂದ ವಿರೋಧ
ಮುಂಬೈ , ಶುಕ್ರವಾರ, 27 ಜುಲೈ 2018 (14:07 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ ‘ಸಂಜು’ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದರ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಇದೀಗ ಈ ಚಿತ್ರದ ಬಗ್ಗೆ ಭೂಗತ ಪಾತಕಿಯೊಬ್ಬ ವಿರೋಧ ವ್ಯಕ್ತಪಡಿಸಿದ್ದಾನೆ.


ಹೌದು, ರಾಜ್​ಕುಮಾರ್ ಹಿರಾನಿ ನಿರ್ದೇಶನದ ಬಾಲಿವುಡ್​ ನಟ ಸಂಜಯ್​ ದತ್​ ಅವರ ಜೀವನಾಧಾರಿತ 'ಸಂಜು' ಚಿತ್ರದಲ್ಲಿ ಮುಂಬೈ ಸ್ಪೋಟದ ಕುರಿತಾದ ದೃಶ್ಯಗಳಿದ್ದು, ಈ ಬಗ್ಗೆ ಇದೀಗ ಮುಂಬೈ ಸ್ಫೋಟದ ರೂವಾರಿ ಅಬು ಸಲೀಂನಿಂದ ವಿರೋಧ ವ್ಯಕ್ತವಾಗಿದೆ.


ಆತ ಈ ಚಿತ್ರದಲ್ಲಿ ತನ್ನ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಇದಕ್ಕೆ ಕೂಡಲೇ ಕ್ಷಮೆ ಕೇಳಬೇಕೆಂದು ಚಿತ್ರ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ. ಒಂದು ವೇಳೆ 15 ದಿನಗೊಳಗೆ ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್​ ಮೂಲಕ ಎಚ್ಚರಿಕೆ ನೀಡಿದ್ದಾನೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಆಸ್ತಿ ಯನ್ನು ಮಗನ ಹೆಸರಿಗೆ ವರ್ಗಾಯಿಸಿದ ನಟ ಅಂಬರೀಷ್