Publish Date: Fri, 27 Jul 2018 (07:14 IST)
Updated Date: Fri, 27 Jul 2018 (07:15 IST)
ಮುಂಬೈ : ಈ ಹಿಂದೆ ಪಾಕ್ ನಟಿ ಮಹೀರಾ ಖಾನ್ ಪಬ್ಲಿಕ್ ನಲ್ಲೇ ಧೂಮಪಾನ ಮಾಡಿ ಟ್ರೋಲ್ ಗೆ ಒಳಗಾಗಿದ್ದರು. ಇದೀಗ ಮತ್ತೊಬ್ಬ ಪಾಕ್ ನಟಿ ಟ್ರೋಲಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಅವರು ಬೇರೆ ಯಾರು ಅಲ್ಲ. ಬಾಲಿವುಡ್ನ 'ಹಿಂದಿ ಮೀಡಿಯಂ' ಚಿತ್ರದ ನಟಿ ಸಬಾ. ನಟಿ ಸಬಾ ಅವರ ನ್ಯೂ ಫೋಟೋ ಶೂಟ್ನ ಒಂದು ಫೋಟೋ ಲೀಕ್ ಆಗಿದ್ದು, ಅದರಲ್ಲಿ ಅವರು ಗುಂಡಿಗಳು ಬಿಚ್ಚಿಕೊಂಡಿರುವಂತಹ ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ಒಂದು ಕೈಯಲ್ಲಿ ಸಿಗರೇಟು ಸುಡುತ್ತಿದ್ದಾರೆ. ಹಿಂಬದಿಯಲ್ಲಿದ್ದ ಸಹಾಯಕಿ ಸಬಾ ಅವರ ಬ್ಲೆಜರ್ ತೆಗೆಯುತ್ತಿದ್ದಾರೆ.
ಈ ರೀತಿ ಮಾದಕತೆಯಿಂದ ಕೂಡಿದ ನಟಿ ಸಬಾ ಅವರ ಈ ಲುಕ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಬಾ ಅವರನ್ನು ಇನ್ನೊಬ್ಬ ಪಾಕ್ ನಟಿ ಮಹೀರಾ ಖಾನ್ಗೆ ಹೋಲಿಸಿದ್ದಾರೆ. ಸಬಾ ಕೂಡ ಮಹೀರಾ ಅವರ ಹಾದಿಯನ್ನು ತುಳಿಯುತ್ತಿದ್ದಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧ ಎಂದು ಸಖತ್ ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ನಟಿ ಸಬಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ