Select Your Language

Notifications

webdunia
webdunia
webdunia
webdunia

ಜನರಿಗಾಗಿ ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡಿದ ನಟ ಜಾಕಿ ಶ್ರಾಫ್

ಜನರಿಗಾಗಿ ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡಿದ ನಟ ಜಾಕಿ ಶ್ರಾಫ್
ಮುಂಬೈ , ಗುರುವಾರ, 26 ಜುಲೈ 2018 (07:22 IST)
ಮುಂಬೈ : ಇತ್ತೀಚೆಗೆ ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಅವರು ಸಾಮಾಜಿಕ ಕೆಲಸವೊಂದನ್ನು ಮಾಡುವುದರ ಮೂಲಕ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ.


ಕೆಲವು ನಟರಿಗೆ ಸ್ವಲ್ಪ ಹೆಸರು , ಹಣ, ಕೀರ್ತಿ ಬಂದುಬಿಟ್ಟರೆ ಸಾಕು ಅವರಲ್ಲಿ ಅಹಂಕಾರ ಮನೆ ಮಾಡುತ್ತದೆ. ತಾನೋಬ್ಬ ಸ್ಟಾರ್ ನಟ ಜನಸಾಮಾನ್ಯರಾಗಿ  ತಾನೇಕೆ ಇಂತಹ ಕೆಲಸಗಳನ್ನು ಮಾಡಬೇಕು ಎಂಬ ಭಾವನೆ ಇರುತ್ತದೆ. ಆದರೆ ಕೆಲವು ನಟರು ಹಾಗಾಲ್ಲ. ತಾವು ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ಸಾಮಾಜಿಕ ಕಳಕಳಿಯನ್ನು ತೋರಿಸುತ್ತಾರೆ. ಜನರಿಗಾಗಿ ಸಾಮಾನ್ಯರಂತೆ ಕೆಲಸ ಮಾಡುತ್ತಾರೆ.  ಅಂತಹ ನಟರ ಸಾಲಿಗೆ ಇದೀಗ  ಬಾಲಿವುಡ್ ನಟ ಜಾಕಿ ಶ್ರಾಫ್ ಅವರು ಕೂಡ ಸೇರಿದ್ದಾರೆ.


ಯಾಕೆಂದರೆ ಇತ್ತೀಚೆಗೆ ಬಾಲಿವುಡ್​ ನಟ ಜಾಕಿ ಶ್ರಾಫ್​​​ ಲಖನೌನ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿ ಟ್ರಾಫಿಕ್​ ಜಾಮ್​ ಆಗಿದೆ. ಅವರು ತಮ್ಮಪಾಡಿಗೆ ತಾವು ಕಾರಲ್ಲಿ ಹಾಯಾಗಿ ಕೂರೋದು ಬಿಟ್ಟು ಕಾರಿನಿಂದ ಕೆಳಗಿಳಿದು ಬಂದು​ ಎದುರಿಗೆ ಬರುವ ವಾಹನಗಳನ್ನು ಕೈ ಸನ್ನೆ ಮಾಡುವ ಮೂಲಕ ಬೇರೆ ಮಾರ್ಗಕ್ಕೆ ಕಳುಹಿಸಿದ್ದಾರೆ. ಬಳಿಕ ತಮ್ಮ ಕಾರಿನಲ್ಲಿ ಕುಳಿತು ತೆರಳಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ. ಸದ್ಯ ಈ ವಿಡಿಯೋ ನೋಡಿದ ಎಲ್ಲರು ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ ಮೇಲೆ ಫುಲ್ ಗರಂ ಆದ ನಟ ಅಭಿಷೇಕ್ ಬಚ್ಚನ್. ಕಾರಣವೇನು ಗೊತ್ತಾ?