Publish Date: Tue, 24 Jul 2018 (18:31 IST)
Updated Date: Tue, 24 Jul 2018 (18:33 IST)
'ಗೋಲ್ಡ್' ಅಕ್ಷಯ್ ಕುಮಾರ್ ಅವರ ಎದುರು ನಟಿ ಮೌನಿ ರಾಯ್ ಅವರ ಮೊದಲ ಚಿತ್ರವಾಗಿದೆ. ರೀಮಾ ಕಾಗ್ಟಿ ಅವರ ನಿರ್ದೇಶನದ ಈ ಚಿತ್ರ ಆಗಸ್ಟ್ 15, 2018 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.
ಅಕ್ಷಯ್ ಕುಮಾರ್ ಅವರ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್‌ಗೆ ಕಾಲಿಡಲು ಮೌನಿ ರಾಯ್ ಬಹುತೇಕ ಸಿದ್ಧವಾಗಿದ್ದಾರೆ. ಅವರು ತುಂಬಾ ಶ್ರಮಿಸುತ್ತಿದ್ದಾರೆ ಎಂದು ಅಕ್ಷಯ್ ಮೌನಿ ಅವರನ್ನು ಹೊಗಳಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಚಿತ್ರದ ಕುರಿತು ಮೌನಿ ಅವರ ಅನುಭವದ ಬಗ್ಗೆ ಕೇಳಿದಾಗ ಅಕ್ಷಯ್ ಕುಮಾರ್ ಅದಕ್ಕೆ ಉತ್ತರಿಸಿದರು. "ನಾನು ಅದಕ್ಕೆ ಉತ್ತರಿಸಬಹುದು ಎಂದು ಭಾವಿಸುತ್ತೇನೆ. ಅವರು ನಮಗಿಂತ ಹೆಚ್ಚು ಕಠಿಣವಾಗಿ ಕೆಲಸ ಮಾಡುತ್ತಾರೆ" ಎಂದು ಹೇಳಿಕೊಂಡಿದ್ದಾರೆ.
ಚಿತ್ರ ತಂಡವು ಈಗಾಗಲೇ 'ನೈನೋ ಸೆ ಬಾಂಧಿ' ಮತ್ತು ಕುಡಿದಿರುವ ಅಕ್ಷಯ್ ಕುಮಾರ್ ಹಾಗೂ ಮುಜುಗರಕ್ಕೊಳಗಾದ ಮೌನಿ ಅವರಿರುವ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಅಕ್ಷಯ್ ಕುಮಾರ್, ಮೌನಿ ರಾಯ್, ಕುನಾಲ್ ಕಪೂರ್, ಅಮಿತ್ ಸಾಧ್, ವಿನೀತ್ ಸಿಂಗ್ ಮತ್ತು ಸನ್ನಿ ಕೌಶಾಲ್ ಅವರು ಅಭಿನಯಿಸಿರುವ 'ಗೋಲ್ಡ್' ಶಕ್ತಿ ತುಂಬಿದ ಪಾತ್ರಗಳ ಭರವಸೆಯನ್ನು ನೀಡುತ್ತದೆ. ರಿಮೇಶ್ ಸಿಧ್ವಾನಿ ಮತ್ತು ಫರಾನ್ ಅಕ್ತರ್ 'ಗೋಲ್ಡ್' ಅನ್ನು ನಿರ್ಮಿಸಿದ್ದು ಆಗಸ್ಟ್ 15, 2018 ರಂದು ತೆರೆಗೆ ಅಪ್ಪಳಿಸಲಿದೆ.