Select Your Language

Notifications

webdunia
webdunia
webdunia
webdunia

ಮೂರು ದಿನಗಳಲ್ಲಿ 33.67 ಕೋಟಿಗಳನ್ನು ಕಲೆಹಾಕಿರುವ ಧಡಾಕ್ ಸಿನಿಮಾ...

ಮೂರು ದಿನಗಳಲ್ಲಿ 33.67 ಕೋಟಿಗಳನ್ನು ಕಲೆಹಾಕಿರುವ ಧಡಾಕ್ ಸಿನಿಮಾ...
ಬೆಂಗಳೂರು , ಸೋಮವಾರ, 23 ಜುಲೈ 2018 (18:44 IST)
ಜಾನ್ವಿ ಕಪೂರ್ ಮತ್ತು ಇಶಾಂತ್ ಕಟ್ಟರ್ ಮುಖ್ಯ ಭೂಮಿಕೆಯಲ್ಲಿರುವ ಚಲನಚಿತ್ರ ಧಡಾಕ್ ಜುಲೈ 20, ಶುಕ್ರವಾರ ದಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೂರೇ ದಿನಗಳಲ್ಲಿ 33.67 ಕೋಟಿ ರೂಪಾಯಿಗಳನ್ನು ಕಲೆಹಾಕಿರುವುದಾಗಿ ವ್ಯಾಪಾರ ವಿಶ್ಲೇಷಕ ತರಣ ಆದರ್ಶ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಧಡಾಕ್ 2791 ಪರದೆಗಳಲ್ಲಿ ಬಿಡುಗಡೆಯಾಗಿದ್ದು ಅದರಲ್ಲಿ 2235 ಭಾರತದಲ್ಲಿ ಹಾಗೂ ಉಳಿದವುಗಳು ವಿದೇಶದಲ್ಲಾಗಿದೆ. ಯುವ ಕಲಾವಿದರನ್ನು ಹೊಂದಿರುವ ಈ ಚಿತ್ರವು ಇಲ್ಲಿಯವರೆಗೂ ಚೆನ್ನಾಗಿಯೇ ಪ್ರದರ್ಶನವನ್ನು ಕಾಣುತ್ತಿದ್ದು ಇದರ ನಿಜವಾದ ಪರೀಕ್ಷೆ ಸೋಮವಾರದಿಂದ ಪ್ರಾರಂಭವಾಗಲಿದೆ.
 
ಧಡಾಕ್ ಮರಾಠಿ ಸಿನಿಮಾ ಸೈರಾಟ್‌ನ ರಿಮೇಕ್ ಆಗಿದ್ದು ಜಾನ್ವಿ ಕಪೂರ್ ಮತ್ತು ಇಶಾಂತ್ ಕಟ್ಟರ್ ಅವರ ಬಾಲಿವುಡ್‌ನ ಚೊಚ್ಚಲ ಚಿತ್ರವಾಗಿದೆ. ರಣಬೀರ್ ಕಪೂರ್ ಅವರ ಸಂಜು ಚಿತ್ರವು ಇನ್ನೂ ಥಿಯೇಟರ್‌ಗಳಲ್ಲಿ ಚೆನ್ನಾಗಿಯೇ ಓಡುತ್ತಿರುವುದರಿಂದ ಧಡಾಕ್ ಪ್ರೇಕ್ಷಕರನ್ನು ತನ್ನೆಡೆ ಸೆಳೆಯುವಲ್ಲಿ ಗೆಲ್ಲುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ ರೆಡ್ಡಿ ಜತೆ ಕಿಚ್ಚ ಸುದೀಪ್ ಫೋಟೊಗೆ ಅಭಿಮಾನಿಗಳಿಂದ ಬೇಸರದ ಕಾಮೆಂಟ್!