Publish Date: Mon, 23 Jul 2018 (15:25 IST)
Updated Date: Mon, 23 Jul 2018 (15:30 IST)
ಬೆಂಗಳೂರು: ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಉದ್ಘಾಟನಾ ಸಮಾರಂಭವು ನಡೆದಿತ್ತು. ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಅಂಬರೀಶ್, ಜನಾರ್ಧನ ರೆಡ್ಡಿ ಮತ್ತಿತರು ಹಾಜರಿದ್ದರು.
ಸುದೀಪ್ ಅವರು ಜನಾರ್ಧನ ರೆಡ್ಡಿ ಜತೆ ಫೋಸ್ ನೀಡಿರುವ ಫೋಟೊಗೆ ಫೇಸ್ ಬುಕ್ ಪೇಜ್ ನಲ್ಲಿ ಸಾಕಷ್ಟು ಟೀಕೆಗಳು ಬಂದಿವೆ.
‘ನಿಮಗೆ ಕ್ಲೀಯರ್ ಇಮೇಜ್ ಇದೆ ಹಾಳು ಮಾಡಿಕೊಳ್ಳಬೇಡಿ’, ‘ಬಿಗ್ ಬಕೆಟ್’ , ರಾಮುಲು ಅಣ್ಣ ಇದ್ದರೆ ಓಕೆ ಇವರು ಯಾಕೆ ಎಂಬಿತ್ಯಾದಿ ಕಾಮೆಂಟ್ ಗಳನ್ನು ಅಭಿಮಾನಿಗಳು ಹಾಕಿದ್ದಾರೆ.
ಶಾಸಕ ಬಿ. ಶ್ರೀರಾಮುಲು ಕೂಡ 'ಸಮರ್ಥನೆಗಾಗಿ ಸಂಪರ್ಕ' ಪ್ರಚಾರಾಂದೋಲನದ ಭಾಗವಾಗಿ ಸ್ಯಾಂಡಲ್ವುಡ್ ನಟ ಸುದೀಪ್ ಅವರನ್ನು ಇಂದು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮೋದಿ ಸರ್ಕಾರ ಜನತೆಗೆ ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿರುವ ಬಗ್ಗೆ ಮಾಹಿತಿ ಇರುವ ಪುಸ್ತಕವನ್ನು ಸುದೀಪ್ ಅವರಿಗೆ ನೀಡಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ