Publish Date: Mon, 23 Jul 2018 (14:35 IST)
Updated Date: Mon, 23 Jul 2018 (14:40 IST)
ಬೆಂಗಳೂರು : ರವಿಚಂದ್ರನ್ ಪುತ್ರ ಮನೋರಂಜನ್ ನಟಿಸುತ್ತಿರುವ ಮೂರನೇ ಚಿತ್ರ 'ಚಿಲ್ಲಂ' ಸಿನಿಮಾದಲ್ಲಿ ನಟಿಸುವುದರ ಮೂಲಕ ನಟ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಸಿನಿಮಾರಂಗಕ್ಕೆ ಮರಳಲಿದ್ದಾರೆ ಎಂದು ಅಭಿಮಾನಿಗಳು ಸಂತೋಷಗೊಂಡಿದ್ದರೆ ಅವರು ಮಾತ್ರ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರಂತೆ.
ಹೌದು. 'ಚಿಲ್ಲಂ' ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದು, ಅದರಲ್ಲೂ ನೆಗೆಟಿವ್ ರೋಲ್ ನಲ್ಲಿ ರಾಘವೇಂದ್ರ ರಾಜ್ ಕುಮಾರ್ ಮಿಂಚ್ತಾರೆ ಅಂತ ಸಖತ್ ಸುದ್ದಿಯಾಗಿತ್ತು. ಆದರೆ ಅವರು ಮಾತ್ರ ನಾನು ನೆಗೆಟಿವ್ ರೋಲ್ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ.
ರಾಘವೇಂದ್ರ ರಾಜ್ ಕುಮಾರ್ ನೆಗೆಟಿವ್ ಪಾತ್ರದಲ್ಲಿ ನಟಿಸೋದನ್ನ ಅವರ ಅಭಿಮಾನಿಗಳು ವಿರೋಧಿಸಿದ್ದರಿಂದ, ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆದಕಾರಣ ಆ ಜಾಗಕ್ಕೆ ಕಾಲಿವುಡ್ ಇಂಡಸ್ಟ್ರಿಯ ಖ್ಯಾತ ಕಲಾವಿದ ಜಗಪತಿ ಬಾಬು ಅವರನ್ನು ಕರೆತರಲಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ