Select Your Language

Notifications

webdunia
webdunia
webdunia
webdunia

ಅವಲಕ್ಕಿ ತಿನ್ನುವುದರಿಂದ ಏನಾಗುತ್ತೆ ಗೊತ್ತೇ?

ಅವಲಕ್ಕಿ ತಿನ್ನುವುದರಿಂದ ಏನಾಗುತ್ತೆ ಗೊತ್ತೇ?
ಬೆಂಗಳೂರು , ಸೋಮವಾರ, 23 ಜುಲೈ 2018 (06:40 IST)
ಬೆಂಗಳೂರು : ತಮಿಳಿನಲ್ಲಿ ಅವಲ್‌, ಕನ್ನಡದಲ್ಲಿ ಅವಲಕ್ಕಿ, ಭೋಜಪುರಿ ಭಾಷೆಯಲ್ಲಿ ಚಿವುರಾ, ಒರಿಯಾದಲ್ಲಿ ಚೂಡ ಎಂದು ಕರೆಯಲ್ಪಡುವ ಬೆಳಗಿನ ಉಪಾಹಾರದ ಜನಪ್ರಿಯ ತಿಂಡಿಯಾಗಿರುವ ಅವಲಕ್ಕಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ.


ಆರೋಗ್ಯಕರ ಡಯೆಟ್‌ ಪಾಲನೆ ಮಾಡಬೇಕು ಎಂದು ಬಯಸುವವರು ಬೆಳಗಿನ ತಿಂಡಿಗೆ ಅವಲಕ್ಕಿ ತಿನ್ನುವುದನ್ನು ರೂಡಿ ಮಾಡಿಕೊಳ್ಳಿ. ಯಾಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳ ಆಗರ. ಇದರಲ್ಲಿ ಕಬ್ಬಿಣದ ಅಂಶ, ಫೈಬರ್‌, ಆಯಂಟಿ ಆಕ್ಸಿಡೆಂಟ್‌ ಹಾಗೂ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್‌ಗಳು ಹೇರಳವಾಗಿವೆ ಎಂದು ವೈಜ್ಞಾನಿಕ ವರದಿಗಳು ಹೇಳಿವೆ.


ಸುಲಭವಾಗಿ ಜೀರ್ಣವಾಗುವ ಅವಲಕ್ಕಿಯು ದೇಹಕ್ಕೂ ಕೂಡ ಆರೋಗ್ಯಕರ. ಅವಲಕ್ಕಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಯಿದೆ. ಇದರಲ್ಲಿ ಶೇಕಡ 76ರಷ್ಟು ಕಾರ್ಬೋ ಹೈಡ್ರೇಟ್‌, ಶೇಕಡ 23ರಷ್ಟು ಕೊಬ್ಬು ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಹಾರ. ಇದರಲ್ಲಿ ಫೈಬರ್‌ ಹೇರಳವಾಗಿರುವುದರಿಂದ ಹೆಚ್ಚು ಹೊತ್ತು ಹಸಿವಾಗುವುದೇ ಇಲ್ಲ. ಅತಿ ತಿನ್ನುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮಧುಮೇಹ, ಚರ್ಮ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅವಲಕ್ಕಿ ಸೇವನೆ ಉತ್ತಮ ಎಂದು ತಿಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಪ್ಪಾಯ ಸೇವಿಸುವುದರಿಂದ ಈ ಅಪಾಯವೂ ಇದೆ!