Publish Date: Thu, 26 Jul 2018 (06:59 IST)
Updated Date: Thu, 26 Jul 2018 (07:06 IST)
ಮುಂಬೈ : ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಬಾಲಿವುಡ್ ನಟಿ, ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅವರು ಇದೀಗ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಆದರೆ ಈ ಚೆಲುವೆಯನ್ನು ಸಿನಮಾ ರಂಗಕ್ಕೆ ಕರೆತಂದಿದ್ದು ಬಾಲಿವುಡ್ ನ ಸ್ಟಾರ್ ನಟರೊಬ್ಬರಂತೆ.
ಅವರು ಬೇರೆ ಯಾರು ಅಲ್ಲ. ಬಾಲಿವುಡ್ ಸಿನಿಮಾ ರಂಗಕ್ಕೆ ಸ್ಟಾರ್ ನಟಿಯರಾದ ಐಶ್ವರ್ಯ ರೈ, ಕತ್ರಿನಾ ಕೈಫ್, ಇನ್ನು ಕೆಲವು ನಟಿಯರನ್ನು ಕರೆತಂದ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರಂತೆ. ಹೌದು. ಸಲ್ಮಾನ್ ಖಾನ್ ಅವರೇ ಸನ್ನಿ ಲಿಯೋನ್ ಅವರನ್ನು ನೋಡಿ, ನೀವೇಕೆ ಚಿತ್ರರಂಗ ಪ್ರವೇಶಿಸಿ ಹೆಸರು ಗಳಿಸಬಾರದು ಎಂಬುದಾಗಿ ಕೇಳಿದ್ದರಂತೆ. ಅಲ್ಲದೇ ನಿಮಗೆ ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶವಿದ್ದು, ಬಹಳಷ್ಟು ಬೇಗನೆ ನೀವು ಜನಪ್ರಿಯತೆ ಗಳಿಸಬಹುದು ಎಂದಿದಾರಂತೆ.
ಆದರೆ ಸನ್ನಿ ಲಿಯೋನ್ ಅವರು, ತಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಕುರಿತು ಸಾಕಷ್ಟು ಅನುಮಾನ ವ್ಯಕ್ತಪಡಿಸಿದರೂ ಕೂಡ ಸಲ್ಮಾನ್ ಖಾನ್ ಅವರೇ ಧೈರ್ಯ ಹೇಳಿ ಸಿನಿಮಾ ಇಂಡಸ್ಟ್ರಿಗೆ ಕರೆ ತಂದಿದ್ದಾರಂತೆ. ಅಲ್ಲದೇ ಈ ಕುರಿತು ಸ್ವತಃ ಸನ್ನಿ ಲಿಯೋನ್ ಅವರೇ ಸಲ್ಮಾನ್ ಖಾನ್ ಕೃಪಾಕಟಾಕ್ಷದಿಂದಾಗಿ ಈ ಹಂತದಲ್ಲಿದ್ದೇನೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ