Publish Date: Thu, 26 Jul 2018 (07:09 IST)
Updated Date: Thu, 26 Jul 2018 (07:18 IST)
ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ.
ಹೌದು. ಇತ್ತೀಚೆಗೆ ನಟ ಅಭಿಷೇಕ್ ಬಚ್ಚನ್ ಲಂಡನ್ನಿಂದ ಮುಂಬೈಗೆ ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಜೊತೆಗೆ ಆಗಮಿಸಿದ ವೇಳೆ ಅಭಿಷೇಕ್ ಅವರಿಂದ ಐಶ್ವರ್ಯ ರೈ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದರು. ಈ ವಿಡಿಯೋ ಆಧಾರದ ಮೇಲೆ ದಂಪತಿ ನಡುವೆ ಜಗಳ ನಡೆದಿದೆ ಅಂತ ವೆಬ್ ಪೋರ್ಟಲ್ ಒಂದು ವರದಿ ಮಾಡಿತ್ತು. ಜಗಳ ನಡೆದಿರುವ ಕಾರಣಕ್ಕೆ ಐಶ್ವರ್ಯ ರೈ ಪುತ್ರಿಯನ್ನು ಅಭಿಷೇಕ್ ಕೈಹಿಡಿದುಕೊಳ್ಳದಂತೆ ತಡೆದಿದ್ದಾರೆ ಅಂತ ಆ ವರದಿಯಲ್ಲಿ ಬರೆಯಲಾಗಿತ್ತು.
ಈ ಸುದ್ದಿ ನಟ ಅಭಿಷೇಕ್ ಬಚ್ಚನ್ ಅವರ ಕಿವಿಗೆ ಬೀಳುತ್ತಲೇ ಮಾಧ್ಯಮಗಳ ಮೇಲೆ ಫುಲ್ ಗರಂ ಆಗಿ ‘ಪೈಪೋಟಿಗೆ ಬಿದ್ದು ಸುದ್ದಿ ಪ್ರಕಟಿಸುವ ಆತುರದಲ್ಲಿ ಸುಳ್ಳು ಸುದ್ದಿ ಪ್ರಕಟಿಸದಿರಿ. ಸುದ್ದಿ ಸೃಷ್ಟಿಸಬೇಕೆಂಬ ನಿಮ್ಮ ಆತುರದ ಮಧ್ಯೆ ಸತ್ಯ ಯಾವುದು ಅನ್ನೋದನ್ನು ಅರಿಯುವ ಸಹನೆ ಇರಲಿ , ಇಂಟರ್ ನೆಟ್ ಅನ್ನೋ ಪ್ರಬಲ ಮಾಧ್ಯಮದಲ್ಲಿ ಊಹಾಪೋಹದ ಸುದ್ದಿ ಹರಡಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ